ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರ ವಿತರಿಸಿ

Lingaraj Badiger
Updated On : 5 Jun 2013, 11:10 am

ತರೀಕೆರೆ: ರೈತರಿಗೆ ತೊಂದರೆಯಾಗದಂತೆ  ರಸಗೊಬ್ಬರ ವಿತರಿಸಬೇಕೆಂದು ತಹಸೀಲ್ದಾರ್ ರಂಜಿತ ತಿಳಿಸಿದ್ದಾರೆ.
 ಮಂಗಳವಾರ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕಿನ ಸರ್ಕಾರಿ ಮತ್ತು ಖಾಸಗಿ ರಸಗೊಬ್ಬರ ವಿತರಕರ ಸಭೆಯ ಅಧ್ಯಕ್ಷತೆ ವಹಿಸಿ
ಮಾತನಾಡಿ, ರಸಗೊಬ್ಬರದ ದರ ಮತ್ತು ದಾಸ್ತಾನು ಪಾರದರ್ಶಕವಾಗಿ ಎಲ್ಲರ ಗಮನಕ್ಕೆ ಬರುವ ರೀತಿಯಲ್ಲಿ ಪ್ರಕಟಿಸಿ, ಪ್ರತಿಯೊಬ್ಬರಿಗೂ ಮಾಹಿತಿ ನೀಡಿ,
ರಸಗೊಬ್ಬರದ ದಾಸ್ತಾನು ಅಗತ್ಯವಿದ್ದರೆ, ಬೇಗ ಮನವಿ ಕೊಡಿ, ಸರ್ಕಾರದ ಸುತ್ತೋಲೆಯನ್ನು ಮೀರಬಾರದು, ಬ್ರಾಂಡ್‌ಗೆ ಅಂಟಿಕೊಳ್ಳದೆ, ರೈತರಿಗೆ ಈ ಬಗ್ಗೆ ತಿಳುವಳಿಕೆ ಕೊಡಿ, ನಿಮ್ಮ ಸಮಸ್ಯೆಗಳಿಗೆ ಓಗೊಡುತ್ತೇವೆ, ತಾಲೂಕು ಅಡಳಿತಕ್ಕೆ ನಿಮ್ಮ ಸಹಕಾರ ಕೊಡಿ ಎಂದು ತಿಳಿಸಿದರು.
 ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮಾತನಾಡಿ, ರಸಗೊಬ್ಬರ ವಿತರಿಸುವಲ್ಲಿ ಅನಗತ್ಯ ಗೊಂದಲ ಬೇಡ, ಫೆಡರೇಶನ್‌ನಲ್ಲಿ ರಸಗೊಬ್ಬರ ಬೇಕಾದಷ್ಟು ದಾಸ್ತಾನು ಇದೆ. ನಿಮ್ಮಲ್ಲಿರುವ ರಸಗೊಬ್ಬರದ ದಾಸ್ತಾನನ್ನು ಪ್ರಕಟಿಸಿ, ಹೋಬಳಿವಾರು ರಸಗೊಬ್ಬರದ ದಾಸ್ತಾನು ಕೊಡಿ ಹಾಗೂ ದಾಸ್ತಾನು ಮತ್ತು ಗೊಬ್ಬರದ ದರವನ್ನು  ಪ್ರಕಟಿಸಿ ಎಂದು ತಿಳಿಸಿದರು. ಗೊಬ್ಬರ ವಿತರಕರು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement