ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಂಗನವಾಡಿ ಬಾಲಕನಿಗೆ ಅಡುಗೆ ಸಹಾಯಕಿಯಿಂದ ಬರೆ!

Vishwanath S
Updated On : 6 Jun 2013, 1:12 am

ಕಾರ್ಕಳ: ಅಂಗನವಾಡಿಯ ಅಡುಗೆ ಸಹಾಯಕಿಯೊಬ್ಬರು ಸೌಟು ಬಿಸಿ ಮಾಡಿ ಮಗುವಿನ ಮುಖ, ಕೈಗೆ ಬರೆ ಹಾಕಿದ ಅಮಾನವೀಯ ಘಟನೆ ಇಲ್ಲಿನ ಕುಕ್ಕುಂದೂರು ಅಯ್ಯಪ್ಪನಗರ ಎಂಬಲ್ಲಿ ಬೆಳಕಿಗೆ ಬಂದಿದೆ. ಅಯ್ಯಪ್ಪನಗರ ರಾಧಾ ಹಾಗೂ ಮಣಿಕಂಠ ದಂಪತಿಯ ಮೂರು ವರ್ಷದ ಪುತ್ರ ಹರ್ಷಿತ್ ಎಂಬಾತನ ಮುಖ ಹಾಗೂ ಕೈಗಳಲ್ಲಿ ಬರೆಯ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಡುಗೆ ಸಹಾಯಕಿ ಬರೆ ಹಾಕಿರುವುದಾಗಿ ಮಗುವಿನ ಪೋಷಕರು ಆರೋಪಿಸಿದ್ದಾರೆ. ಕುಕ್ಕುಂದೂರು ಗ್ರಾಮದ ಅಂಗನವಾಡಿಗೆ ಕಳೆದ ಕೆಲವು ತಿಂಗಳಿನಿಂದ ಹರ್ಷಿತನನ್ನು ಕಳುಹಿಸಲಾಗುತ್ತಿತ್ತು. ಬುಧವಾರ ಮನೆಗೆ ಬಂದ ಈತನ ಮುಖದಲ್ಲಿ ಬರೆ ಗಾಯ ಕಾಣಿಸಿಕೊಂಡಿತ್ತು. ಈ ಬಗ್ಗೆ ಇತರೆ ಮಕ್ಕಳಲ್ಲಿ ವಿಚಾರಿಸಿದಾಗ, ಅಡುಗೆ ಸಹಾಯಕಿ ಸೌಟಿನಿಂದ ಬರೆ ಹಾಕಿರುವುದು ಬೆಳಕಿಗೆ ಬಂದಿದೆ.ಅಡುಗೆ ಸಹಾಯಕಿಯ ಈ ಕೃತ್ಯದ ಬಗ್ಗೆ ಹೆತ್ತವರು ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement