ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಉನ್ನತ ವ್ಯಾಸಾಂಗ ಮಾಡಿ ಸತ್ಪ್ರಜೆಗಳಾಗಿ

Lingaraj Badiger
Updated On : 6 Jun 2013, 10:57 am

ಚಿಕ್ಕಮಗಳೂರು: ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗ ಮಾಡಿ ದೇಶದ ಸತ್ಪ್ರಜೆಯಾಗಲು ವಿದ್ಯೆ ಅಗತ್ಯವಾಗಿದೆ ಎಂದು ಲಯನ್ಸ್ ಮಾಜಿ ಅಧ್ಯಕ್ಷ ಶಶಿಪ್ರಸಾದ್ ಹೇಳಿದರು.
 ನಗರದ ನೆಹರು ರಸ್ತೆಯ ಶ್ರೀರಾಮ ಸಭಾಂಗಣದಲ್ಲಿ ಸವಿತಾ ಸಮಾಜ ಸೇವಾ ಟ್ರಸ್ಟ್‌ನಿಂದ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿವೇತನ ಮತ್ತು ಪಠ್ಯಪುಸ್ತಕಗಳನ್ನು ವಿತರಿಸಿ ಮಾತನಾಡಿ, ಅನ್ನದಾನ, ನೇತ್ರದಾನ, ಅಕ್ಷರದಾನ ಎಲ್ಲವೂ ಮುಖ್ಯವಾದವು. ವಿದ್ಯಾರ್ಥಿ ದಿಸೆಯಲ್ಲಿ ವಿದ್ಯಾಭ್ಯಾಸ ಮಾಡದಿದ್ದರೆ ಜೀವನದಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ತಂದೆ ತಾಯಿಯರು ಎಷ್ಟೇ ಕಷ್ಟವಾದ್ರೂ ಮಕ್ಕಳಿಗೆ ವಿದ್ಯೆಯನ್ನು ಕೊಡಿಸುವುದರಲ್ಲಿ ವಂಚಿಸಬಾರದು.  ದೇಶದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದ್ದು ಇತರೆ ರಾಷ್ಟ್ರಗಳಂತೆ ಭಾರತವೂ ಮುಂದುವರಿಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
 ವಕೀಲ ಪ್ರಕಾಶ್ ಮಾತನಾಡಿ, ಜೀವನದಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ಇರುವುದರ ಜೊತೆಗೆ ತಮ್ಮ ಗುರಿ ಮುಟ್ಟುವಲ್ಲಿ ಹೆಚ್ಚಿನ ಶ್ರಮ ಹಾಕಬೇಕು ಎಂದರು. ಸವಿತಾ ಸಮಾಜ ಸೇವಾ ಟ್ರಸ್ಟಿನ ಅಧ್ಯಕ್ಷ ಕೆ. ಬಾಲಕೃಷ್ಣ ಮಾತನಾಡಿ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಪಠ್ಯಪುಸ್ತಕವನ್ನು ಸುಮಾರು 12 ವರ್ಷದಿಂದ ವಿತರಿಸುತ್ತಿದ್ದೇವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕು ಎಂದರು. ತಾಲೂಕು ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಹರೀಶ್, ಲಕ್ಷ್ಮೀಕಾಂತ್, ವೆಂಕಟೇಶ್,ಶ್ರೀಧರ್, ವಿಶ್ವನಾಥ್, ಜೆ. ಸತ್ಯನಾರಾಯಣ್, ಪುರುಷೋತ್ತಮ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement