ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರೇಲ್ವೆ ನಿಲ್ದಾಣ 3-4 ತಿಂಗಳಲ್ಲಿ ಪೂರ್ಣ

Lingaraj Badiger
Updated On : 6 Jun 2013, 10:51 am

ಕ.ಪ್ರ.ವಾರ್ತೆ  ಬೀರೂರು  ಜೂ. 5
ಚಿಕ್ಕಮಗಳೂರು ಜಿಲ್ಲೆಯ ಏಕೈಕ ರೇಲ್ವೆ ಜಂಕ್ಷನ್ ಆಗಿ ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿರುವ ಬೀರೂರಿನ ರೇಲ್ವೆ ನಿಲ್ದಾಣಕ್ಕೆ ನೂತನ ಕಟ್ಟಡ ಭಾಗ್ಯ ಒದಗಿ ಬಂದಿದ್ದು ಅತ್ಯಂತ ಸುಸಜ್ಜಿತವಾದ ನಿಲ್ದಾಣದ ಕಾಮಗಾರಿಯು ಬರದಿಂದ ಸಾಗಿದೆ.                                       
 ಅಂತರ ರಾಜ್ಯ ರೈಲು ಸೇವೆ, ಸರಕು ಸೇವೆ ಹಾಗು ನಾಲ್ಕಾರು ಜಿಲ್ಲೆಗಳ ಪ್ರಯಾಣಿಕರಿಗೆ ಅತ್ಯಂತ ಉಪಯುಕ್ತವಾದ ರೈಲ್ವೆ ಸೇವೆ ನೀಡುತ್ತಿರುವ ಈ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ಸಾಕಷ್ಟು ಭಾರಿ ವಿವಿಧ ಸಂಘಟನೆಗಳು ಸೇರಿದಂತೆ ಪ್ರಯಾಣಿಕರು, ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಇದರ ಪರಿಣಾಮವಾಗಿ ಇದೀಗ ಅತ್ಯಂತ ಸುಂದರವಾದ ನಿಲ್ದಾಣ ಕಾಮಗಾರಿಯು ಕೋಟ್ಯಂತರ ರು.ಗಳ ವೆಚ್ಚದಲ್ಲಿ ನಡೆಯುತ್ತಿದೆ.
ಮೂರು ಫ್ಲಾಟ್‌ಫಾರಂ: ಈಗ ಇರುವ ಎರಡು ಫ್ಲಾಟ್‌ಫಾರಂ ಹಳಿಗಳ ಜೊತೆಗೆ ಮೂರನೇ ಫ್ಲಾಟ್‌ಫಾರಂ ನಿರ್ಮಾಣ, ನೂತನ ಮೇಲ್ಸೇತುವೆ ಕಾಮಗಾರಿ ಬರದಿಂದ ಸಾಗಿದೆ. ದಿನನಿತ್ಯ 30 ಕ್ಕೂ ಹೆಚ್ಚು ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು ಇಲಾಖೆಗೆ ಹೆಚ್ಚಿನ ಆದಾಯ ತಂದು ಕೊಡುತ್ತಿದೆ.
ಇನ್ನೂ ಮೂರು ಅಥವಾ ನಾಲ್ಕು ತಿಂಗಳಲ್ಲಿ ನೂತನ ನಿಲ್ದಾಣ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement