ಹಣ ದುರುಪಯೋಗ: ದೂರು
ತರೀಕೆರೆ: ಹಣ ದುರುಪಯೋಗ ಪಡಿಸಿಕೊಂಡ ಬ್ಯಾಂಕ್ ಮೇನೇಜರ್ ವಿರುದ್ಧ ಬ್ಯಾಂಕ್ ರೀಜನಲ್ ಮೇನೇಜರ್ ದೂರು ನೀಡಿದ್ದು ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮೀಪದ ಬಾವಿಕೆರೆ ಕಾವೇರಿ ಗ್ರಾಮೀಣ ಬ್ಯಾಂಕ್ ಮೇನೇಜರ್ ತರೀಕೆರೆ ಶಾಖಾ ಬ್ಯಾಂಕ್ಗೆ ಪಾವತಿಸಲು ಜೂನ್ 3 ರಂದು 15 ಲಕ್ಷ ರುಪಾಯಿ ತರುತ್ತಿದ್ದಾಗ ಹಣ ಕಳ್ಳತನವಾಯಿತು ಎಂದು ತಿಳಿಸಿದ್ದರು ಎನ್ನಲಾಗಿದ್ದು, ಇದೀಗ ಕಾವೇರಿ ಗ್ರಾಮೀಣ ಬ್ಯಾಂಕ್ನ ರೀಜನಲ್ ಮೇನೇಜರ್ ಗುರುನಾಥ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನೆಡೆಸುತ್ತಿತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
9ರಂದು ತುಳು ಉತ್ಸವ
ಭದ್ರಾವತಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಭದ್ರಾವತಿಯ ತುಳು ಕೂಟದ ಸಂಯುಕ್ತ ಆಶ್ರಯದಲ್ಲಿ ಜೂ.9ರಂದು ಭಾನುವಾರ ಪಟ್ಟಣದ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತುಳು ಉತ್ಸವ - 2013ನ್ನು ಆಚರಿಸಲಾಗುವುದು.
ಉತ್ಸವವನ್ನು ಶಾಸಕ ಎಂ.ಜೆ. ಅಪ್ಪಾಜಿ ಬೆಳಗ್ಗೆ 8.30 ಗಂಟೆಗೆ ಉದ್ಘಾಟಿಸುವರು. ಉಡುಪಿ ಜಿಲ್ಲೆ ಶಿರ್ವದ ಸೇಂಟ್ಮೇರಿಸ್ ಪ.ಪೂ.ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಸ್. ಪದ್ಮನಾಭ ಭಟ್ ಉಪನ್ಯಾಸ ನೀಡುವರು.
ರಸಮಂಜರಿ: ತುಳು ಕೂಟದ ಅಧ್ಯಕ್ಷ ಡಾ. ಯು. ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ತುಳು ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.