ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಐಐಟಿ ಪ್ರವೇಶ ಪಡೆದ ಬಡ ವಿದ್ಯಾರ್ಥಿಗೆ ಬೇಕಿದೆ ಸಹಾಯ

Vishwanath S
Updated On : 7 Jun 2013, 11:09 am

ಸುಬ್ರಹ್ಮಣ್ಯ: ಬಡ ಕೂಲಿ ಕಾರ್ಮಿಕನೊಬ್ಬನ ಪುತ್ರ ಭುವನೇಶ್ವರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಗೆ ಪ್ರವೇಶ ಪಡೆದಿದ್ದಾನೆ. ಸುಬ್ರಹ್ಮಣ್ಯ ಸಮೀಪದ ಏನೆಕಲ್‌ನ ಸಿದ್ಧನಾಯ್ಕ, ಸುಶೀಲಾ ದಂಪತಿ ಪುತ್ರ ಮಂಜುನಾಥ ಈ ಸಾಧನೆ ಮಾಡಿದ್ದು ಆರ್ಥಿಕ ಸಂಕಷ್ಟದಿಂದ ಈಗ ತೊಂದರೆ ಎದುರಿಸುತ್ತಿದ್ದಾನೆ. ಮೈಸೂರಿನ ಹರಪ್ಪನಹಳ್ಳಿ ತಾಲೂಕಿನ ಭಾಗಳ್ಳಿ ಮೂಲದವ ಸಿದ್ಧನಾಯ್ಕ 20 ವರ್ಷಗಳ ಹಿಂದೆ ಕೆಲಸ ಅರಸಿ ಏನೆಕಲ್ಲಿಗೆ ಬಂದಿದ್ದಾರೆ. ದೇಶದ 12 ಐಐಟಿ ಕೇಂದ್ರಗಳ ಪೈಕಿ ಒಂದಾದ ಒಡಿಶಾದ ಭುವನೇಶ್ವದಲ್ಲಿ ನಡೆದ ಸಂದರ್ಶನಕ್ಕೆ ಹಾಜರಾಗಿ ಪ್ರವೇಶವನ್ನೂ ಗಿಟ್ಟಿಸಿದ್ದಾನೆ. ಮಂಜುನಾಥಗೆ ನೆರವು ನೀಡುವವರು ಮೊ. 9902495359ಗೆ ಸಂಪರ್ಕಿಸಿ, ಮಂಗಳೂರಿನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ: 2858101003675 (ಐಎಫ್‌ಸಿ ಸಂಖ್ಯೆ: ಸಿಎನ್‌ಆರ್‌ಬಿ 0002858)ಗೆ ಧನಸಹಾಯ ಮಾಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement