ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಿಜೃಂಭಣೆಯ ನರಸಿಂಹ ಜಯಂತಿ

Mainashree
Updated On : 8 Jun 2013, 12:20 pm

ಕ.ಪ್ರ.ವಾರ್ತೆ  ಬೀರೂರು   ಜೂ.7
ಇಲ್ಲಿಗೆ ಸಮೀಪದ ಬಗ್ಗವಳ್ಳಿಯಲ್ಲಿ ಇರುವ ಪುರಾತನವಾದ ಹೊಯ್ಸಳ ಶೈಲಿಯ ದೇವಾಲಯ ಇರುವ ಬಗ್ಗವಳ್ಳಿಯಲ್ಲಿ ನರಸಿಂಹ ಜಯಂತಿಯನ್ನು ವಿಜೃಂಭಣೆಯಿಂದ ನಡೆಸಲಾಯಿತು.
ಬೆಂಗಳೂರಿನ ವಕೀಲ ಕೃಷ್ಣಮೂರ್ತಿಯವರ ಮುಂದಾಳತ್ವದಲ್ಲಿ ಹೋಮ, ಹವನ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು. ತರೀಕೆರೆ, ಕಡೂರು ತಾಲೂಕಿನ ನೂರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಅತ್ಯಂತ ಪುರಾತನವಾದ ಪುರಾತ್ವ ಇಲಾಖೆ ಅಡಿಯಲ್ಲಿ ಇರುವ ಈ ದೇವಾಲಯ ಗ್ರಾಮೀಣ ಭಾಗದಲ್ಲಿ ಇರುವುದರಿಂದ ಇದರ ಸಂರಕ್ಷಣೆಗೆ ಭಕ್ತರ ಸಹಕಾರ ಅಗತ್ಯವಾಗಿದ್ದು ಇಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಬರಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement