ಶಾಲಾ ಸಹಾಯಕಿಗೆ ಲೈಂಗಿಕ ಕಿರುಕುಳ
ಚಿತ್ರದುರ್ಗ: ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕಾದ ಪುರಪಿತೃಗಳೇ ಅಮಾಯಕ ಮಹಿಳೆ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಇಲ್ಲಿನ ಲಿಟಲ್ ಫೆರೀಸ್ ಶಾಲೆ ಮತ್ತು ದೂರಶಿಕ್ಷಣ ಕಾಲೇಜಿನಲ್ಲಿ ಕಚೇರಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆ ಮೇಲೆ ನಗರಸಭೆ ಪಕ್ಷೇತರ ಸದಸ್ಯ ಮಲ್ಲಿಕಾರ್ಜುನ (ವಾರ್ಡ್ ನಂ.6) ಹಾಗೂ ಕಾಂಗ್ರೆಸ್ನ ಗರಡಿ ಪ್ರಕಾಶ್ (34) ಬಲತ್ಕರಿಸಲು ಯತ್ನಿಸಿದ್ದಾಗಿ ಆರೋಪಿಸಲಾಗಿದೆ.