ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಒಕ್ಕಲೆಬ್ಬಿಸುವುದೇ ನಕ್ಸಲೀಯರಾಗಲು ಕಾರಣ

Mainashree
Updated On : 9 Jun 2013, 11:03 am

ಮೂಡಿಗೆರೆ: ಇತ್ತೀಚಿನ ದಿನಗಳಲ್ಲಿ ಒತ್ತುವರಿ ತೆರವು ನೆಪದಲ್ಲಿ ಮಧ್ಯಮ ವರ್ಗ ಹಾಗೂ ಬಡವರನ್ನು ಒಕ್ಕಲೆಬ್ಬಿಸಿ ಬೀದಿಪಾಲು ಮಾಡುತ್ತಿರುವುದರಿಂದ ಅವರನ್ನು ಜಿಲ್ಲಾಡಳಿತವೇ ನಕ್ಸಲೈಟ್‌ಗಳಾಗಲು ಪ್ರೋತ್ಸಾಹಿಸಿದಂತಾಗಿದೆ ಎಂದು ಪತ್ರಕರ್ತ ಹೊರಟ್ಟಿ ರಘು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲಾಡಳಿತ ಕಂದಾಯ ಭೂಮಿಯಲ್ಲಿ ಶೇ.1/4 ಭಾಗ ಅರಣ್ಯಕ್ಕೆಂದು ಬಿಟ್ಟುಕೊಟ್ಟಿದ್ದು, ಈ ಭೂಮಿಯನ್ನು ಯಾವುದೆಂದು ಗಡಿ ಗುರುತಿಸದೆ, ನಕ್ಷೆಯನ್ನೂ ತಯಾರಿಸಲಿಲ್ಲ. ಆದರೆ ಅವರು ನೀಡಿದ ಸರ್ವೆ ನಂಬರಿನಲ್ಲಿ ಅರಣ್ಯಕ್ಕೆ ಜಾಗ ಮೀಸಲಾಗಿದೆ ಎಂದು ತಿಳಿಸುತ್ತದೆ.  
ಅರಣ್ಯ ಇಲಾಖೆಗೆ ಕಂದಾಯ ಇಲಾಖೆಯಿಂದ ಯಾವುದೇ ದಾಖಲಾತಿ ದೊರಕದೇ ಇರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಗೊಂದಲಕ್ಕೀಡಾಗಿದ್ದಾರೆ. ಇದರ ಮಧ್ಯದಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡವರನ್ನು ಒಕ್ಕಲೆಬ್ಬಿಸುವಂತೆ ಸರ್ಕಾರ ತಿಳಿಸುತ್ತಿದೆ. ಆದರೇ ನೈಜ ವಿಷಯದ ಅರಿವಿಲ್ಲದೆ ಜನ ಸಾಮಾನ್ಯರು ಸಂಕಷ್ಟಕ್ಕಿಡಾಗುತ್ತಿದ್ದಾರೆ ಎಂದರು.
ನೈಜ ವಿಷಯವಿಲ್ಲ: ಅಧಿಕಾರಿಗಳು ಸರ್ಕರಕ್ಕೆ ನೈಜ ವಿಷಯ ಮುಚ್ಚಿಟ್ಟು ವಾಸ್ತವಾಂಶ ತೋರಿಸದೇ ಇರುವುದರಿಂದ ನ್ಯಾಯಾಲಯಕ್ಕೆ ಮಾಹಿತಿಯ ಕೊರತೆ ಉಂಟಾಗಿದೆ. ಇದರಿಂದಾಗಿ ಅಧಿಕಾರಿಗಳು ನೀಡಿರುವ ವರದಿಯನ್ನೇ ಸರಿ ಎಂದು ಒಕ್ಕಲೆಬ್ಬಿಸಲು ಆದೇಶ ನೀಡುತ್ತಿದೆ. ಇದಕ್ಕೆ ಕಳಸ ಇನಾಂ ಭೂಮಿಯೇ ಒಂದು ಉದಾಹರಣೆಯಾಗಿದೆ ಎದವರು ಹೇಳಿದರು.
ಈಗ ಮಲೆನಾಡು ಜನರಿಗೆ ಡೀಮ್‌ಡ್ ಫಾರೆಸ್ಟ್ ಒತ್ತುವರಿ ತೆರವು ಎಂಬುವ ವಿಚಾರ ಕಾಡ್ಗಿಚ್ಚಿನಂತೆ ಹರಡಿದ್ದು. ಜನ ಸಾಮಾನ್ಯರನ್ನು ಕಂಗೆಡಿಸಿದೆ. ಈ ಹಿಂದೆ ಜಿಲ್ಲಾಡಳಿತ ಹಾಗೂ ರಾಜಕಾರಣಿಯೊಬ್ಬರ ವೈಮನಸ್ಸು ಇಂದು ಶ್ರೀಮಂತರು, ಬಡವರು ಮತ್ತು ಮಧ್ಯಮ ವರ್ಗದವರು ಜಾಗ ಕಳೆದುಕೊಳ್ಳುವಂತ ಪರಿಸ್ಥಿತಿ ಎದುರಾಗಿದೆ ಎಂದರು.
ಕುಟುಂಬ ತೆರವು: 2002ರ ಗಾಂಧಿ ಜಯಂತಿಯಂದು ತತ್ಕೊಳದಲ್ಲಿ ವಾಸಿಸುತ್ತಿದ್ದ ಹಲವು ಕುಟುಂಬಗಳನ್ನು ತೆರವುಗೊಳಿಸಿರುವುದೇ ಒಂದು ಜ್ವಲಂತ ಸಾಕ್ಷಿಯಾಗಿದೆ. ಈಗ ಡಿಮ್ಡ್ ಫಾರೆಸ್ಟ್‌ನಲ್ಲಿ ಒಕ್ಕಲೆಬ್ಬಿಸಲು ಹುನ್ನಾರ ನಡೆಸುತ್ತಿದ್ದು,  ಯುವ ಜನರನ್ನು ನಕ್ಸಲರನ್ನಾಗಿಸಲು ಹೊರಟಿರುವ ಜಿಲ್ಲಾಡಳಿತ ಇನ್ನಾದರೂ ತಪ್ಪು ಮಾಹಿತಿ ನೀಡುವುದು ಬಿಟ್ಟು.
ಒತ್ತುವರಿಯನ್ನು ಕೈಬಿಡುವಂತೆ ಸರ್ಕಾರ ಒತ್ತಾಯಿಸಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement