ಕನ್ನಡ ಭವನದಲ್ಲಿ ಶ್ರದ್ಧಾಂಜಲಿ ಸಭೆ
ಶೃಂಗೇರಿ: ಇತ್ತೀಚೆಗೆ ನಿಧನ ಹೊಂದಿದ ಕಾಂಗ್ರೆಸ್ ಮುಖಂಡ ಕೆ.ಆರ್. ಉದಯ್ ಕುಮಾರ್ ಅವರಿಗೆ ಪಟ್ಟಣದ ಕನ್ನಡ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಬಿ.ಎಲ್. ರವಿಕುಮಾರ್ ಮಾತನಾಡಿ, ಉದಯ್ ಕುಮಾರ್ ಕೇವಲ ರಾಜಕೀಯದಲ್ಲಿ ಅಲ್ಲದೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡ ಬಹುಮುಖ ವ್ಯಕ್ತಿತ್ವ ಹೊಂದಿದ್ದರು. ಇವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.ಕಸಾಪ ಅಧ್ಯಕ್ಷ ಜಿ.ಎಂ. ಸುರೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ ಹೆಗ್ಡೆ, ಪ್ರೊ.ಕೆ.ಪುಟ್ಟಯ್ಯ, ಬೇಗಾನೆ ಕಾಡಪ್ಪಗೌಡ, ಸತೀಶ್, ವೆಂಕಟೇಶ್ ಭಟ್, ವೆಂಕಟೇಶ್ ಭಟ್,ನಾಗೇಶ್, ಶೃಂಗೇರಿ ಸುಬ್ಬಣ್ಣ, ವೀರಪ್ಪ ಗೌಡ ಇದ್ದರು.
ಅಪಘಾತ; ವ್ಯಕ್ತಿ ಸಾವು
ಕೊಪ್ಪ: ಪಟ್ಟಣದ ಬಸ್ಸು ನಿಲ್ದಾಣ ಸಮೀಪ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ ಅಪಘಾತ ಸಂಬವಿಸಿ ಬೈಕ್ ಚಾಲಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ಭಾನುವಾರ ಬೆಳಿಗ್ಗೆ ಸಂಬವಿಸಿದೆ. ಮೃತರನ್ನು ಇಲ್ಲಿನ ಕುವೆಂಪು ನಗರದ ವಾಸಿ, ಅರಣ್ಯ ರಕ್ಷಕ ಡೇನಿಯಲ್ ಡಿಸೋಜಾ(58) ಎಂದು ಗುರುತಿಸಲಾಗಿದ್ದು, ಬೆಳಿಗ್ಗೆ ಪತ್ನಿಯೊಂದಿಗೆ ಚೆರ್ಚಿಗೆ ಹೋಗುವ ಸಂದರ್ಬದಲ್ಲಿ ಅಪಘಾತ ನಡೆದು ಸ್ಥಳದಲ್ಲೇ ಮೃತ ಪಟ್ಟಿದ್ದು, ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಇಮಿಲ್ಟಾಪಿಂಟೋ ರವರಿಗೆ ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಾಗಿದೆ.