ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಮ್ಮ ನಡೆ, ನುಡಿ ನೇರವಾಗಿರಬೇಕು

Lingaraj Badiger
Updated On : 10 Jun 2013, 11:16 am

ಕ.ಪ್ರ. ವಾರ್ತೆ, ನ.ರಾ.ಪುರ, ಜೂ.9
ರಾಘವೇಂದ್ರ ನಗರ ಬಡಾವಣೆ ನಿವಾಸಿಗಳ ಅಸೋಸಿಯೇಶನ್ ಚಟುವಟಿಕೆಗಳು ಭಾರತೀಯ ಸಂಸ್ಕೃತಿಗೆ ಧಕ್ಕೆಯಾಗದಂತೆ ನಡೆಸಿಕೊಂಡು ಬರುತ್ತಿವೆ ಎಂದು ಲೇಖಕಿ ಭಾಗ್ಯ ನಂಜುಂಡಸ್ವಾಮಿ ತಿಳಿಸಿದರು.
ಪಟ್ಟಣದ ರಾಘವೇಂದ್ರ ಬಡಾವಣೆಯ ನಿವಾಸಿಗಳ ಅಸೋಸಿಯೇಶನ್ 3 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಬೇರಿನಲ್ಲಿ ವಂಚನೆ ಚಿಗುರಿನಲ್ಲಿ ಚಿಂತನೆ ಎಂಬಂತೆ ಮಾತು ಹಾಗೂ ಕೃತಿಗಳಲ್ಲಿ ವ್ಯತ್ಯಾಸ ಇರಬಾರದು. ನಮ್ಮ ನಡೆ, ನುಡಿ ನೇರವಾಗಿರಬೇಕು. ನೆರೆ ಹೊರೆಯವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಭಾವೈಕ್ಯತೆ ಮೂಡುತ್ತದೆ: ಬಡಾವಣೆಗಳಲ್ಲಿ ಸಂಘಟನೆ ಮಾಡುವುದರಿಂದ ಅಲ್ಲಿ ವಾಸಿಸುವ ವಿವಿಧ ಕುಟುಂಬಗಳಲ್ಲಿ ಭಾವೈಕ್ಯತೆ ಮೂಡುತ್ತದೆ. ಸಂಸ್ಕೃತಿ, ಆಚಾರ ವಿಚಾರಗಳು ಅರಿಯಲಿದೆ. ಅನೇಕ ಕುಟುಂಬಗಳಲ್ಲಿನ ಅನುಕರಣೀಯವಾದ ನಡವಳಿಕೆಗಳು ಪರಸ್ಪರ ಪರಿಚಯವಾಗಲಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಘವೇಂದ್ರ ನಗರ ಬಡಾವಣೆಯ ಅಸೋಸಿಯೇನ್ ಅಧ್ಯಕ್ಷ ಸುಂದರೇಶ್ ಮಾತನಾಡಿ, ಅಸೋಸಿಯೇಶನ್ ಮೂಲಕ ಬಡಾವಣೆಯಲ್ಲಿ ಹಲವು ಬದಲಾವಣೆ ತಂದಿದ್ದೇವೆ ಎಂದು ಹೇಳಿದರು. ಅಸೋಸಿಯೇಶನ್ ಕಾರ್ಯದರ್ಶಿ ಎಂ.ಆರ್. ರವಿಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಪಂ ಸದಸ್ಯ ಅಂಜುಮ್ ಸಮಾರಂಭ ಉದ್ಘಾಟಿಸಿದರು. ಅಸೋಸಿಯೇಶನ್ ಉಪಾಧ್ಯಕ್ಷೆ ಮಂಜಳಾ, ಖಚಾಂಚಿ ವಸಂತಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement