ಪರಿಸರ ರಕ್ಷಣೆಗೆ ಮುಂದಾಗಿ: ಲಿಂಗಪ್ಪ
ನರಸಿಂಹರಾಜಪುರ: ಪರಿಸರ ಮಾನವನಿಗೆ ಎಲ್ಲಾ ಅವಶ್ಯಕತೆ ಪೂರೈಸುತ್ತಿದ್ದರೂ ಮಾನವ ದುರಾಸೆಯಿಂದ ಪರಿಸರವನ್ನು ಹಾಳು ಮಾಡುತ್ತಿದ್ದಾನೆ ಎಂದು ಮುತ್ತಿನಕೊಪ್ಪ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಬಿ. ಲಿಂಗಪ್ಪ ತಿಳಿಸಿದರು.
ಇತ್ತೀಚೆಗೆ ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಸಿರು ವೇದಿಕೆ ಮತ್ತು ಇಕೋ ಕ್ಲಬ್ ಆಶ್ರಯದಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಪರಸರದ ಉಳಿವಿನ ಬಗ್ಗೆ ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಮನುಷ್ಯನ ದುರಾಸೆಯಿಂದಾಗಿ ಅರಣ್ಯ ನಾಶವಾಗುತ್ತಿದೆ. ಇದರಿಂದ ವಾತಾವರಣದಲ್ಲಿ ಏರು ಪೇರಾಗುತ್ತಿದೆ ಎಂದರು.
ಸಹ ಶಿಕ್ಷಕ ಶಾಂತಪ್ಪ, ಅಮೀನ್, ಗಂಗಾಧರಪ್ಪ,ತ್ರಿವೇಣಿ, ನೀಲಮ್ಮ, ಮಹೇಶ್, ಚೇತನ್ ಕುಮಾರ್ ಇದ್ದರು. ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಪರಿಸರಕ್ಕೆ ಸಂಬಂಧಿಸಿದ ಚಿತ್ರ ಕಲೆ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಭಾ ಕಾರ್ಯಕ್ರಮಕ್ಕೂ ಮೊದಲು ಪರಿಸರದ ಅರಿವು ಮೂಡಿಸುವ ಜಾಥಾ ನಡೆಯಿತು.