ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭೂ ಕಬಳಿಕೆ ನಿಷೇಧ ವಿಧೇಯಕ ಅನುಷ್ಠಾನ ಬೇಡ: ಮೀಗಾ

Lingaraj Badiger
Updated On : 10 Jun 2013, 11:22 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಜೂ.9
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಧೇಯಕವನ್ನು ಅನುಷ್ಠಾನಗೊಳಿಸಬಾರದೆಂದು ಕೆಪಿಸಿಸಿ ಕಿಸಾನ್ ಘಟಕ ಉಪಾಧ್ಯಕ್ಷ ಸಚಿನ್ ಮೀಗಾ ಅವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.
ರೈತರು ದುರುದ್ದೇಶದಿಂದ ಒತ್ತುವರಿ ಮಾಡಿಲ್ಲ. ತಮ್ಮ ರೈತಾಪಿ ಜೀವನವನ್ನು ಸಾಗಿಸಲು ಒತ್ತುವರಿ ಮಾಡಿದ್ದಾರೆ. ನಗರ ಪ್ರದೇಶದ ಒತ್ತುವರಿದಾರರು ಹಣಗಳಿಸಲು ಭೂಮಾಫಿಯಾಕ್ಕೆ ಮುಂದಾಗಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದ ರೈತರು ಒತ್ತುವರಿ ತಮ್ಮ ಬದುಕಿಗಾಗಿ ಮಾಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ಒತ್ತುವರಿಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೀವನಕ್ಕಾಗಿ ರೈತರು ಜಮೀನು ಒತ್ತುವರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಿಪಿಎಲ್ ಕುಟುಂಬದ ಸದಸ್ಯರು ಹರಿಜನರು, ಗಿರಿಜನರು ಹಿಂದುಳಿದ ವರ್ಗದವರು ತಮ್ಮ ವಾಸಕ್ಕೆ ಒತ್ತುವರಿ ಮಾಡಿದವರ ಜಾಗವನ್ನು ಸರ್ಕಾರ ಸಕ್ರಮ ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ. ವೈಯಕ್ತಿಕ ದ್ವೇಷದಿಂದ ಹಳ್ಳಿ ಹಳ್ಳಿಗಳಲ್ಲಿ ರೈತಾಪಿ ವರ್ಗದವರು ತಮ್ಮ ಅಕ್ಕಪಕ್ಕದವರ ಒತ್ತುವರಿ ಬಗ್ಗೆ ಅರ್ಜಿ ಬರೆಯುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಇದರ ಪರಿಣಾಮವಾಗಿ ಅಧಿಕಾರಿಗಳು ಎಲ್ಲಾ ರೈತರ ಒತ್ತುವರಿಗಳನ್ನು ಖುಲ್ಲಾ ಮಾಡಿಸಲು ಈ ಅರ್ಜಿಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿರುತ್ತಾರೆ.
ಕೂಡಲೇ ಈ ಭಾಗದ ಅರಣ್ಯಾಧಿಕಾರಿಗಳು ಕ್ಷುಲ್ಲಕ ಕಾರಣಕ್ಕೆ ಒತ್ತುವರಿದಾರರನ್ನು ಖುಲ್ಲಾ ಮಾಡಿಸಲು ಮುಂದಾಗಬಾರದು, ಇದನ್ನು ಮೀರಿ ಅಧಿಕಾರಿಗಳು ಒತ್ತುವರಿ ಖುಲ್ಲಾ ಮಾಡಲು ಮುಂದಾದರೆ, ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement