ಕಾಂಮ್ರೆಡ್ ವೇದಮೂರ್ತಿಗೆ ಶ್ರದ್ಧಾಂಜಲಿ
ತರೀಕೆರೆ: ಸಿಪಿಐ ಪಕ್ಷ, ಎಐಟಿಯು, ಸಿಎಐಕೆಎಸ್ ತಾಲೂಕಿನ ಸಾಮೂಹಿಕ ಸಂಘಟನೆಗಳಿಂದ ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಮ್ಯೂನಿಸ್ಟ್ ಪಕ್ಷದ ಮುಖಂಡ, ಚಳುವಳಿಗಾರ ಕಾಂ. ವೇದಮೂರ್ತಿಯವರ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.
ಹಣ್ಣೆ ಶಾಖಾ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಭೆಯ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಸಿಪಿಐ ಕಾರ್ಯದರ್ಶಿ ಟಿ.ಜಿ. ಶಿವಕುಮಾರ್ ಮಾತನಾಡಿ, ವೇದಮೂರ್ತಿಗಳು ಕಾರ್ಮಿಕ ಮುಖಂಡರಾಗಿದ್ದರು, ಕಮ್ಮೂನಿಸ್ಟ್ ಚಳುವಳಿಗೆ ಬೆನ್ನೆಲುಬಾಗಿದ್ದರು ಎಂದು ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಆರ್. ದೇವಾನಂದ್ ಮಾತನಾಡಿ ಚಳುವಳಿಗಳ ಪ್ರಸ್ತುತಿ ಅಗತ್ಯವಾಗಿದೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಶಿಷ್ಟವಾದ ಸಮಸ್ಯೆಗಳಿದೆ, ಕಮ್ಯೂನಿಸ್ಟ್ ಪಕ್ಷದ ಮುಖಂಡರಾಗಿದ್ದ ವೇದಮೂರ್ತಿಗಳಿಲ್ಲದೆ ಜಿಲ್ಲೆಯಲ್ಲಿ ಚಳುವಳಿ ಶೂನ್ಯವಾಗಿದೆ ಎಂದು
ತಿಳಿಸಿದರು. ಅಮ್ಜದ್, ಎಂ. ನರೇಂದ್ರ, ವೈ.ವಿ.ನಂಜುಂಡಪ್ಪ, ಗುಳ್ಳದಮನೆ ರಾಮಚಂದ್ರಪ್ಪ, ಸಿಪಿಐ ಬಸವರಾಜು, ಕೃಷ್ಣಪ್ಪ, ಬಿ.ಎಸ್. ಭಗವಾನ್, ಮಂಜುನಾಥ್, ವಿಜಯಕುಮಾರಿ ಮಾತನಾಡಿದರು. ಕೆ. ಶ್ರೀನಿವಾಸರಾವ್, ರಘು, ಎ.ಆರ್.ಕೆ. ಶ್ರೀನಿವಾಸ್, ಚಂದ್ರಶೇಖರ್ ಭಾಗವಹಿಸಿದ್ದರು.