ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜು.3 ರಿಂದ ಸೈನಿಕ ನೇಮಕಾತಿ ರ್ಯಾಲಿ

Lingaraj Badiger
Updated On : 11 Jun 2013, 11:10 am

ಚಿಕ್ಕಮಗಳೂರು: ಸೈನಿಕ ನೇಮಕಾತಿ ರ್ಯಾಲಿ ಚಿಕ್ಕಮಗಳೂರು ನಗರದಲ್ಲಿ ಜುಲೈ 3 ರಿಂದ 10ರವರೆಗೆ ನಡೆಯಲಿದೆ.
 ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಬಾಲಚಂದ್ರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಈ ರ್ಯಾಲಿ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸೇನಾ ಉದ್ಯೋಗಾಂಕ್ಷಿಗಳು ಈ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಅಗತ್ಯ ಮೂಲ ಸೌಕರ್ಯಗಳು ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
 ಸೇನಾ ನೇಮಕಾತಿ ಕಚೇರಿ ಮಂಗಳೂರು ವಿಭಾಗದ ಅಧಿಕಾರಿ ಎ.ಎಸ್. ಗುಮ್ಮನ್  ಮಾತನಾಡಿ, ವಿವಿಧ ಹಂತಗಳಲ್ಲಿ ಈ ನೇಮಕಾತಿ ರ್ಯಾಲಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆ, ಬಯೋವುಟ್ರಿಕ್ ತೆಗೆದುಕೊಳ್ಳುವಿಕೆ, ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಇದರಲ್ಲಿ ಆಯ್ಕೆಯಾದವರಿಗೆ ಮಂಗಳೂರಿನಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು.
 ಸೇನೆಗೆ ಆಯ್ಕೆಯಾದವರಿಗೆ ಆಕರ್ಷಕ ವೇತನ ಸೇರಿದಂತೆ ಅನೇಕ ಉಚಿತ ಸೌಲಭ್ಯಗಳು ದೊರಕುತ್ತವೆ. ಈ ಭಾಗದ ಯುವಕರಿಗೆ ಇದೊಂದು ಸುವರ್ಣವಕಾಶವಾಗಿದೆ ಚಿಕ್ಕಮಗಳೂರು ಜಿಲ್ಲೆಯಿಂದ ಈ ಬಾರಿ ಹೆಚ್ಚಿನ ಯುವಕರು ಈ ಸೇನಾ ರ್ಯಾಲಿಗೆ ಆಗಮಿಸುವ ನಿರೀಕ್ಷೆ ಇರುವುದರಿಂದ ಜುಲೈ 10 ರಂದು ಈ ಜಿಲ್ಲೆಯವರಿಗೆ ಮಾತ್ರ ಆಯ್ಕೆ ನಡೆಯಲಿದೆ ಎಂದರು.  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಿತ್ರ ಹೆರಾಜೆ, ಸೇನಾ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement