ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವೀರಭದ್ರಸ್ವಾಮಿ ಅದ್ಧೂರಿ ರಥೋತ್ಸವ

Lingaraj Badiger
Updated On : 11 Jun 2013, 11:17 am

ಕ.ಪ್ರ.ವಾರ್ತೆ, ಕಡೂರು,  ಜೂ.10
ಪಟ್ಟಣದ ಗ್ರಾಮ ದೇವರಾದ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಕಳೆದ ಮಂಗಳವಾರದಿಂದ ಜಾತ್ರೆಗೆ ಚಾಲನೆ ಸಿಕ್ಕಿದ್ದು, ಸೋಮವಾರ ಬೆಳಿಗ್ಗೆ 9.45ಕ್ಕೆ ವೀರಭದ್ರಸ್ವಾಮಿಯ ಜೊತೆ ಶ್ರೀ ಕೆಂಚಾಂಬ, ಶ್ರೀ ಸ್ವರ್ಣಾಂಬ, ಶ್ರೀ ಬನಶಂಕರಿ, ಶ್ರೀ ಚೌಡ್ಲಾಪುರದಮ್ಮ ಹಾಗೂ ಶ್ರೀ ಭದ್ರಕಾಳಮ್ಮ ದೇವರನ್ನು ಪಟ್ಟಣದ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಛತ್ರದ ಬೀದಿಯ ಶ್ರೀ ಕೆಂಚಾಂಬದೇವಿ ದೇವಾಲಯದ ಬಳಿ ತರಲಾಯಿತು.
ನಂತರ ಮಂಗಳಾರತಿ ನಡೆಸುವ ಮೂಲಕ ವಿಧಿ ವಿಧಾನದಂತೆ ಪೂಜೆ ಪುನಸ್ಕಾರಗಳು ನೆರವೇರಿಸಿದ ನಂತರ ವೀರಭದ್ರಸ್ವಾಮಿ ಹಾಗೂ ಶ್ರೀ ಭದ್ರಕಾಳಮ್ಮನವರನ್ನು ಅಲಂಕೃತಗೊಳಿಸಿದ್ದ ರಥದಲ್ಲಿ ಕುಳ್ಳಿರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಿಗಧಿತ ಸಮಯದಂತೆ ಮಧ್ಯಾಹ್ನ 1.15ಕ್ಕೆ ಸೇರಿದ್ದ ಸಾವಿರಾರು ಭಕ್ತರು ರಥವನ್ನು ಎಳೆಯುತ್ತಾ ಸ್ವಾಮಿಯ ಕೃಪೆಗೆ ಪಾತ್ರರಾದರು. ರಥವನ್ನು ಶ್ರೀ ಕೆಂಚಾಂಬ ದೇವಾಲಯದಿಂದ ಶ್ರೀ ವೀರಭದ್ರಸ್ವಾಮಿ ದೇವಾಲಯದವರೆಗೂ ಎಳೆಯಲಾಯಿತು.
ಪ್ರತಿ ವರ್ಷದಂತೆ ನಡೆಯುವ ಬಾವುಟದ ಹರಾಜು ಪ್ರಕ್ರಿಯೆಯಲ್ಲಿ ಹಳೇಪೇಟೆಯ ಸಿದ್ದಯ್ಯ ಎಂಬವರು 75 ಸಾವಿರ ರು.ಗಳಿಗೆ ಸ್ವಾಮಿಯವರ ಬಾವುಟವನ್ನು ಹರಾಜು ಕೂಗಿದರು. ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರಿಗೆ ಪ್ರತಿ ವರ್ಷದಂತೆ ಈ ಭಾರಿಯೂ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರಾ ಮಹೋತ್ಸವ ಹನ್ನೆರಡು ಹರಿವಾಣದ ಗೌಡರಾದ ಕೆ.ಎಂ. ಕೆಂಪರಾಜು ಮತ್ತು ಗುರುಗಳಾದ ಕುಮಾರಸ್ವಾಮಿಗಳ ನೇತೃತ್ವದಲ್ಲಿ ನಡೆಯಿತು. ಜಾತ್ರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನರಲ್ ತಿಮ್ಮಯ್ಯ, ಕೆ.ಎಸ್. ರಮೇಶ್, ಎಚ್.ಎಂ. ಲೋಕೇಶ್, ಹೂವಿನ ಗೋವಿಂದಪ್ಪ, ಶರತ್ ಕೃಷ್ಣಮೂರ್ತಿ, ಈರಳ್ಳಿ ರಮೇಶ್, ಕೋಳಿ ಲೋಕೇಶ್, ಕೆ.ಎಂ. ಸೋಮಶೇಖರ್, ತೋಟದ ಮನೆ ಮೋಹನ್, ಕೆ.ಎಚ್. ಲಕ್ಕಣ್ಣ, ಕೆ.ಎಸ್. ಆನಂದ್, ಕೆ.ಜಿ. ಲೋಕೇಶ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement