ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ: ಡಾ. ಸರಸ್ವತಿ

Lingaraj Badiger
Updated On : 11 Jun 2013, 11:10 am

ಕ.ಪ್ರ.ವಾರ್ತೆ  ಬೀರೂರು  ಜೂ.10 ಉಪ್ಪಾರ ಸಮಾಜ ಸ್ವಾಭಿಮಾನದಿಂದ ಮುಂದೆ ಬರಲು ಶಿಕ್ಷಣ ಅಗತ್ಯವಾಗಿದ್ದು ಪೋಷಕರಿಗೆ ಈ ಬಗ್ಗೆ ಮನವರಿಕೆ ಮಾಡಬೇಕು ಎಂದು ಬಿಜಾಪುರದ ಅತ್ತಿಮಬ್ಬೆ ರಾಜ್ಯಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಸರಸ್ವತಿ ಚಿಮ್ಮಲಗಿ ಹೇಳಿದರು.
 ಪಟ್ಟಣದ ಎಸ್.ಎಂ. ಕೃಷ್ಣ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಉಪ್ಪಾರ ಕ್ಯಾಂಪ್ ಬಡಾವಣೆಯ ಪುರುಷೋತ್ತಮಾನಂದಪುರಿಸ್ವಾಮಿ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ 7ನೇ ವರ್ಷದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ ಉಧ್ಘಾಟಿಸಿ ಮಾತನಾಡಿದರು.
 ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಪುರುಷರಷ್ಟೇ ಸ್ತ್ರೀಯರಿಗೂ ಸಮಾನ ಅವಕಾಶಗಳು  ದೊರಕುತ್ತಿವೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ದೊಡ್ದದು ಎಂಬ ಅರಿವು ಇರಬೇಕಿದ್ದು, ಕೆಲವೇ ವಿಕೃತ ಮನಸ್ಸುಗಳಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕ್ರಿಯೆಯಲ್ಲಿ ತೊಡಗಿದ್ದು ಸುಶಿಕ್ಷಿತ ನಾಗರಿಕ ಸಮಾಜ ಸ್ವೇಚ್ಚಾಚಾರವನ್ನು ಎಂದಿಗೂ ಒಪ್ಪುವುದಿಲ್ಲ ಎಂದರು.
 ಗುಣಮಟ್ಟದ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಸಮಾಜ ವಿಂಗಡಣೆಯಿಂದಾಗಿ ಸಾಧನೆಗೆ ಅಡ್ಡಿಯಾಗುತ್ತಿದೆ. ಸಮಾಜ ಒಂದಾಗುವ ನಿಟ್ಟಿನಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
 ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 1 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಿಸಲಾಯಿತು. ಬಿ.ಎಚ್. ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ.ಕೆ. ಚಂದ್ರಶೇಖರ್, ಬಾವಿಮನೆ ಪ್ರಕಾಶ್, ವೈದ್ಯಾಧಿಕಾರಿ ಡಾ. ಪರಪ್ಪ,ಪ್ರಕಾಶ್, ಶ್ರೀನಿವಾಸ್, ಮೋಹನ್, ಗಂಗಾಧರಯ್ಯ  ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement