ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಸಮಾಜ ತಿದ್ದುವಲ್ಲಿ ಜೇಸಿ ಸಂಸ್ಥೆ ಪಾತ್ರ ಮಹತ್ವದ್ದು'

Lingaraj Badiger
Updated On : 13 Jun 2013, 10:47 am

ಬಾಳೆಹೊನ್ನೂರು: ಇಲ್ಲಿನ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಗೆ ಜೇಸಿ ವಲಯ 14ರ ವಲಯಾಧ್ಯಕ್ಷ ದೇವಿಪ್ರಸಾದ್ ಕಾಯಾರ್‌ಮಾರ್ ಸೋಮವಾರ ಅಧಿಕೃತ ಭೇಟಿ ನೀಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿದರು.
ನಂತರ ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜೇಸಿ ಸಂಸ್ಥೆ ಸಮಾಜವನ್ನು ತಿದ್ದುವಂತಹ ಒಂದು ಅದ್ಭುತ ಶಕ್ತಿ. ಇದ್ದು, ಸಮಾಜ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ಹೆಚ್ಚಿನ ಶ್ರಮ ವಹಿಸುತ್ತಿದೆ ಎಂದರು.
ಇದೇ ಜೂ. 23 ರಂದು ಬೆಂಗಳೂರಿನಲ್ಲಿ ಅರ್ಧವಾರ್ಷಿಕ ಮಿಡ್‌ಕಾನ್ ಸಮ್ಮೇಳನಕ್ಕೆ ಆಹ್ವಾನ ನೀಡಿದ ಅವರು, ವಲಯದ ಸಮಗ್ರ ಮಾಹಿತಿಯುಳ್ಳ ವಲಯ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಜೇಸಿ ಅಧ್ಯಕ್ಷ ಮಂಜುನಾಥ್ ತುಪ್ಪೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಲಯಾಧ್ಯಕ್ಷರ ಭೇಟಿ ಸಂದರ್ಭದಲ್ಲಿ ವಲಯಾಧ್ಯಕ್ಷರ ಕಾರ್ಯನಿರ್ವಹಣಾಧಿಕಾರಿ ಸೈಮನ್, ಜೇಸಿ ಸಂಸ್ಥೆಯ ಪೂರ್ವಾಧ್ಯಕ್ಷರಾದ ಚೈತನ್ಯ ವೆಂಕಿ, ಎಚ್. ಗೋಪಾಲ್, ಸುಧಾಕರ, ಸತೀಶ್ ಅರಳಿಕೊಪ್ಪ, ಸುರೇಂದ್ರ, ಸಹ ಕಾರ್ಯದರ್ಶಿ ಚೇತನ್ ವಸ್ತ್ರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement