ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮನೆ ಬೀಗ ಮುರಿದು ಉಂಗುರ ಕಳವು

Lingaraj Badiger
Updated On : 14 Jun 2013, 10:43 am

ನರಸಿಂಹರಾಜಪುರ: ಮುತ್ತಿನಕೊಪ್ಪದಲ್ಲಿ ಅರಣ್ಯ ಪಾಲಕ ಸುರೇಶ್ ಎಂಬುವರ ಮನೆಯಲ್ಲಿ 25 ಗ್ರಾಂ ನ 4 ಬಂಗಾರದ ಉಂಗರ ಕಳ್ಳತನವಾದ ಘಟನೆ ನಡೆದಿದೆ.
ಅರಣ್ಯ ಪಾಲಕ ಸುರೇಶ್ ಜೂನ್ 10ರಂದು ಮನೆಗೆ ಬೀಗ ಹಾಕಿ ಮನೆಯವರೊಂದಿಗೆ ತುಮಕೂರಿಗೆ ಹೋಗಿದ್ದರು. ಜೂನ್ 12 ರ ಬುಧವಾರ ಮನೆಗೆ ಬಂದು ನೋಡಿದಾಗ ಮನೆ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ.
ಮನೆ ಒಳಗೆ ಇದ್ದ ಗಾದ್ರೇಜ್ ಬೀರಿನ ಬೀಗ ತೆಗೆದ ಕಳ್ಳರು 4 ಬಂಗಾರದ ಉಂಗರ ಕಳವು ಮಾಡಿದ್ದಾರೆ. ಉಳಿದ ಯಾವುದೇ ವಸ್ತುವೂ ಕಳ್ಳತನವಾಗಿಲ್ಲ. 25 ಗ್ರಾಂ ಬಂಗಾರದ ಬೆಲೆ ಅಂದಾಜು ರು. 70,000 ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.
ಬುಧವಾರ ಕಳ್ಳರ ಪತ್ತೆಗಾಗಿ ಪೊಲೀಸ್ ಶ್ವಾನದಳ ಆಗಮಿಸಿತ್ತು. ಪ್ರಕರಣ ದಾಖಲಿಸಿಕೊಂಡ ನರಸಿಂಹರಾಜಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement