ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಳಿಗೆಯಲ್ಲಿ ಅನಧಿಕೃತ ವ್ಯಾಪಾರ: ಆರೋಪ

Lingaraj Badiger
Updated On : 14 Jun 2013, 10:43 am

ಕ.ಪ್ರ,ವಾರ್ತೆ ಕೊಪ್ಪ  ಜೂ.13:
ಪಟ್ಟಣದ ಬಸ್‌ಸ್ಟಾಂಡ್ ಬಳಿ ಪಪಂಗೆ ಸೇರಿದ ಅಂಗಡಿ ಮಳಿಗೆಗಳಲ್ಲಿ ಅನಧಿಕೃತವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಇದರಿಂದ ಪಪಂ ಬೊಕ್ಕಸಕ್ಕೆ ನಷ್ಟವಾಗುತ್ತಿರುವುದರಿಂದ ತಕ್ಷಣದಲ್ಲಿ ತೆರವುಗೊಳಿಸಿ ಹರಾಜಿನ ಮೂಲಕ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಸಾರ್ವಜನಿಕರು ಪಪಂ ಮುಖ್ಯಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಪಟ್ಟಣದ ಬಸ್ಟಾಂಡ್ ಮುಂಭಾಗದಲ್ಲಿರುವ ಪಪಂ ವಾಣಿಜ್ಯ ಮಳಿಗೆ  ಪೈಕಿ ಮಾರ್ಕೆಟ್ ರಸ್ತೆಗೆ ಅಭಿಮುಖವಾಗಿರುವ ಮಳಿಗೆ ಸಂಖ್ಯೆ 5, ಪಪಂ ದಾಖಲೆಯ ಪ್ರಕಾರ ಖಾಲಿ ಇದೆ ಅದರೆ ಸದರಿ ಮಳೆಗೆಯಲ್ಲಿ ತರಕಾರಿ ವ್ಯಾಪರಿಯೊಬ್ಬರು ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವಿಲೇವಾರಿ ಅಗತ್ಯ: ಖಾಲಿ ಇರುವ ಮಳಿಗೆಗಳನ್ನು ಸಾರ್ವಜನಿಕ ಮತ್ತು ಪಪಂ ಆದಾಯದ ಹಿತದೃಷ್ಟಿಯಿಂದ ಬಹಿರಂಗ ಹಾರುಜು ಮೂಲಕ ವಿಲೇವಾರಿ ಮಾಡಬೇಕೆಂಬ ನಿಯಮವಿದ್ದರೂ, ಈ ರೀತಿ ಅನಧಿಕೃತವಾಗಿ ಅಕ್ರಮಿಸಿಕೊಡು ವ್ಯಾಪಾರ ವಹಿವಾಟು ನಡೆಸುತಿದ್ದಾರೆ.
ಆದರೂ, ಪಪಂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಇದರಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ವ್ಯಕ್ತವಾಗುತ್ತಿದೆ.
ಸದರಿ ಮಳೆಗೆಯನ್ನು ಖುಲ್ಲಾ ಮಾಡಿಸಿ, ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಬೇಕು. ಇದೇ ರೀತಿ ಬಸ್ಸು ನಿಲ್ದಾಣದ ಮುಂಭಾಗದ ಕೆಲವು ಮಳಿಗೆ ಹಾಗೂ ಟಾಕೀಸ್ ರಸ್ತೆ ಮಳಿಗೆ ಸಂಖ್ಯೆ 2ರಲ್ಲಿ ಅನಧಿಕೃತವಾಗಿ ವ್ಯಾಪಾರ ಇದೇ ರೀತಿ ಮುಂದುವರಿಸಿದರೆ ಈ ಪ್ರಸ್ತಾವನೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement