ಆರೋಗ್ಯ, ಶಿಕ್ಷಣಕ್ಕೆ ಒತ್ತು: ಸದಕುಲ್ಲ
ಮೂಡಿಗೆರೆ: ಸಮಸ್ತ ಕೇರಳ ಸುನ್ನಿ ವಿದ್ಯಾರ್ಥಿ ಫೆರೇಷನ್ ಪ್ರಾಂರಭಗೊಂಡು 23 ವರ್ಷಗಳಾಗಿದ್ದು. ಕರ್ನಾಟಕದಲ್ಲೂ ಉತ್ತಮ ಕೆಲಸಗಳನ್ನು ನಿರ್ವಹಿಸಿಕೊಂಡು ಹೋಗುವುದರ ಮೂಲಕ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಮಂಗಳೂರು ಜುಮ್ಮಾ ಮಸೀದಿಯ ಸದಕುಲ್ಲ ಫೈಝಿ ಖತೀಬರು ತಿಳಿಸಿದರು.
ಅವರು ಪಟ್ಟಣದ ಹ್ಯಾಂಡ್ ಪೋಸ್ಟ್‌ನ ಎಸ್‌ಕೆಎಸ್‌ಎಸ್‌ಎಫ್ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಧ್ಯಯನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ಕೇರಳದಲ್ಲಿ 1989 ರ ಫೆ, 2 ರಂದು ಎಸ್‌ಕೆಎಸ್‌ಎಸ್‌ಎಫ್ ಪ್ರಾರಂಭಗೊಂಡಿದ್ದು. ಇಸ್ಲಾಮೀಕ್ ಸೆಂಟರ್, ಇಸ್ಲಾಮಿಕ್ ಸಾಹಿತ್ಯ ಅಕಾಡೆಮಿ ಇವು ಪ್ರಮುಖವಾದವು ಎಂದರು.