ಪಥ ಬದಲಾವಣೆ ಆಗಬೇಕು
ತರೀಕೆರೆ: ಭದ್ರಾ ಮೇಲ್ದಂಡೆ ಯೋಜನೆ ಪಥ ಬದಲಾವಣೆ ಆಗಲೇಬೇಕು ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದ್ದಾರೆ.
ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಪರ ನಮ್ಮ ಪಕ್ಷದ ಬೆಂಬಲವಿದೆ. ಭದ್ರಾ ಕಡೂರಿಗೂ ಬೇಕು ಎಂದು ಹಕ್ಕೊತ್ತಾಯ ಮಾಡಿದ್ದೇವೆ. ತಾಲೂಕಿನ ಅಜ್ಜಂಪುರದಲ್ಲಿ ಇಂದು ಸರ್ಕಾರ ಕೈಗೊಳ್ಳುತ್ತಿದ್ದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಮುಂದೂಡಲಾಗಿದೆ. ಯೋಜನೆಯಿಂದ ತರೀಕೆರೆ ಮತ್ತು ಅಜ್ಜಂಪುರ ರೈತರಿಗೆ ತುಂಬಾ ಅನ್ಯಾಯವಾಗುತ್ತದೆ. ಈ ಬಗ್ಗೆ ಸಂಸತ್ ಸದಸ್ಯರು, ಶಾಸಕರು ಮತ್ತು ರೈತರನ್ನು ಒಳಗೊಂಡಂತೆ ನೀರಾವರಿ ಸಚಿವರೊಡನೆ ಸಭೆ ನೆಡೆಸೋಣ, ಭದ್ರಾ ಮೇಲ್ದಂಡೆ ಯೋಜನೆಯ ಪಥ ಬದಲಾವಣೆಯಾಗಲೇಬೇಕು ಎಂದು ತಿಳಿಸಿದರು.
ಅವಿನಾಭಾವ ಸಂಬಂಧ: ಭದ್ರಾ ನದಿಗೂ ತಮಗೂ ಅವಿನಾಭಾವ ಸಂಬಂಧ ಇದೆ. ಕಡೂರಿಗೆ ಕುಡಿಯುವ ನೀರು ಸರಬರಾಜು ಯೋಜನೆಗೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.
ಡೆಂಘೀ ಕಾಯಿಲೆಯಿಂದ ನೊಂದವರಿಗೆ ಸರ್ಕಾರ ಪರಿಹಾರ ನೀಡುವ ವಿಚಾರದಲ್ಲಿ ತಾವು ಎಲ್ಲ ರೀತಿಯಲ್ಲಿ ಪ್ರಯತ್ನಿಸುವುದಾಗಿ ಅವರು ತಿಳಿಸಿದರು. ಮಾಜಿ ಪುರಸಭಾಧ್ಯಕ್ಷ ಟಿ.ಆರ್.ನಾಗರಾಜ್, ಟಿ.ಎನ್. ವಿಶುಕುಮಾರ್ ರೈತರು ಇದ್ದರು.