ಸಂಪೂರ್ಣ ಮದ್ಯ ನಿಷೇಧಕ್ಕೆ ಮಾಜಿ ಶಾಸಕ ನೀಲಕಂಠಪ್ಪ ಒತ್ತಾಯ
ತರೀಕೆರೆ: ಸಂಪೂರ್ಣ ಮದ್ಯ ನಿಷೇಧ ಮಾಡಬೇಕೆಂದು ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ನೇತೃತ್ವದಲ್ಲಿ ಸಾರ್ವಜನಿಕರು ಮತ್ತು ಅಡಕೆ ಬೆಳೆಗಾರರು ಶುಕ್ರವಾರ ಉಪವಿಭಾಗಾದಿಕಾರಿಗಳಿ ಮನವಿ ನೀಡಿ ಒತ್ತಾಯಿಸಿದ್ದಾರೆ.
ಗುಟ್ಕಾ ನಿಷೇಧದಿಂದ ಒಬ್ಬನ ಬಾಳು ಹಾಳಾದರೆ, ಮದ್ಯಪಾನದಿಂದ ಇಡೀ ಕುಟುಂಬ, ಸಾರ್ವಜನಿಕರಿಗೂ ಮಾರಕ. ಜನರ ಬಗ್ಗೆ ಕಾಳಜಿ ಇದ್ದರೆ ಅವರಿಗಾಗುವ ದುಷ್ಪರಿಣಾಮಗಳನ್ನು ತಪ್ಪಿಸುವುದು ಜನಪ್ರತಿನಿಧಿಗಳ ಹೊಣೆ. ಹಾಗಾಗಿ ಕೂಡಲೇ ರಾಜ್ದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಮಲ್ಲೇಶ್, ರಾಜೇಶ್ ಮತ್ತು ಅಡಿಕೆ ಬೆಳೆಗಾರರು ಭಾಗವಹಿಸಿದ್ದರು.