ಸುವರ್ಣ ಟ್ರಸ್ಟ್ನಿಂದ ಉಚಿತ ಆರೋಗ್ಯ ತಪಾಸಣೆ
ನರಸಿಂಹರಾಜಪುರ: ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗೂ ಸುವರ್ಣ ಆರೋಗ್ಯ ಟ್ರಸ್ಟ್ ವತಿಯಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಉಚಿತ ಹೃದಯ ರೋಗ, ನರ ರೋಗ, ಮೂತ್ರ ಪಿಂಡದ ಕಲ್ಲು ತಪಾಸಣಾ ಶಿಬಿರದಲ್ಲಿ 200 ಜನರನ್ನು ತಪಾಸಣೆ ಮಾಡಲಾಯಿತು.
ಇವರಲ್ಲಿ ಹೃದಯ ರೋಗ ಹಾಗೂ ನರ ರೋಗದಿಂದ ಬಳಲುತ್ತಿದ್ದ 10 ಜನರನ್ನು ಸಪ್ತಗಿರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಹೃದಯ ರೋಗ ತಜ್ಞ ಡಾ. ಚಂದ್ರಶೇಖರ್, ನರ ರೋಗ ತಜ್ಞ ಡಾ. ಶಿವರಾಮಕೃಷ್ಣ, ಮೂತ್ರ ಪಿಂಡ ತಜ್ಞ ಡಾ. ರುದ್ರೇಶ್, ಡಾ. ಸಂತೋಷ್ ರೋಗಿಗಳನ್ನು ತಪಾಸಣೆ ಮಾಡಿದರು.
ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ತಪಾಸಣಾ ಶಿಬಿರಕ್ಕೆ ನೆರವಾದರು.
--