ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸ್ವಚ್ಛತೆ ಕಾಪಾಡಿ, ರೋಗ ಹರಡುವಿಕೆ ತಡೆಗಟ್ಟಿ: ಡಾ. ವೆಂಕಟೇಶ್

Lingaraj Badiger
Updated On : 15 Jun 2013, 10:43 am

ಶೃಂಗೇರಿ: ಮನೆ, ಸರಿಸರದ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ, ಸೊಳ್ಳೆಗಳನ್ನು ನಾಶಪಡಿಸುವುದರ ಮೂಲಕ ಮಲೇರಿಯಾ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು.
ಪಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಲೇರಿಯಾ ಮಾಸಾಚಾರಣೆ ಪೂರ್ವಭಾವಿ ಸಭೆ ಹಾಗೂ ಡೆಂಘೀ ಕುರಿತ ಮುಂಜಾಗ್ರತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆಯಂಗಳದಲ್ಲಿ ನೀರು ನಿಲ್ಲದಂತೆ ಮುನ್ನವೆಚ್ಚರಿಕೆ ವಹಿಸಬೇಕು. ನಿಂತ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿಯಾಗಿ ಮಲೇರಿಯಾ ರೋಗ ಹರಡುತ್ತದೆ. ಕಸ ಕಡ್ಡಿಗಳು ಸೇರಿದಂತೆ ತ್ಯಾಜ್ಯವಸ್ತುಗಳ ಸಂಗ್ರಹ ಮಾಡಿದೇ ಅವುಗಳನ್ನು ನಾಶಪಡಿಸಬೇಕು. ಹಳ್ಳಿಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಕೆಲ ಆಗಬೇಕಿದೆ. ಮನೆಯ ಸುತ್ತಲು ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಿಸಬೇಕು. ನೀರಿನ ತೊಟ್ಟಿಗಳಿಗೆ ಮುಚ್ಚಳ ಹಾಕಬೇಕು. ಈ ರೀತಿ ಮುಂಜಾಗ್ರತೆ ವಹಿಸಬೇಕಿದೆ ಎಂದರು.
ಪ್ರಾತ್ಯಕ್ಷತೆ ಮೂಲಕ ಡೆಂಘೀ ಹರಡುವ ಕೀಟಾಣುಗಳನ್ನು ತೋರಿಸಲಾಯಿತು. ಡೆಂಘೀ ರೋಗದ ಕುರಿತು ವಿಶೇಷ ಮಾಹಿತಿ ನೀಡಲಾಯಿತು.
ತಹಸೀಲ್ದಾರ್ ದೇವಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶೃಂಗೇರಿ ಪೊಲೀಸ್ ಇನ್ಸ್‌ಪೆಕ್ಟರ್ ಸಂಗಮನಾಥ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ್, ರೋಟರಿ ಸಂಸ್ಥೆಯ ಅಧ್ಯಕ್ಷ ಮಹೇಶ್, ಗಣೇಶ್ ಮತ್ತಿತರರು ಉಪಸ್ಶಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಧಾಕರ ಅಗಳಗಂಡಿ ಸ್ವಾಗತಿಸಿ, ನಿರೂಪಿಸಿದರು. ಭಾಸ್ಕರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement