ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ
ಚಿಕ್ಕಮಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2012 ನೇ ಸಾಲಿನ ಪುಸ್ತಕ ಬಹುಮಾನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
2012 ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ಪ್ರಥಮವಾಗಿ ಪ್ರಕಟವಾಗಿರುವ ಕಾವ್ಯ, ಕಾದಂಬರಿ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನಚರಿತ್ರೆ, ಆತ್ಮಕಥೆ, ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ಮಾನವಿಕಗಳು, ಸಂಶೋದನೆ, ಅನುವಾದ, ಸಂಕೀರ್ಣ ಮತ್ತಿತರ ಪ್ರಕಾರಗಳ ಮುದ್ರಿತವಾಗಿರುವ ಪುಸ್ತಕಗಳ ಒಂದು ಕೃತಿಯನ್ನು ರಿಜಿಸ್ಟರ್, ಕನ್ನಡ ಸಾಹಿತ್ಯ ಅಕಾಡಮಿ, ಕನ್ನಡ ಭವನ, ಎರಡನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು ಇವರಿಗೆ ಜುಲೈ 15ರೊಳಗೆ ಕಳುಹಿಸಬಹುದಾಗಿದ್ದು, ಮಾಹಿತಿಗಾಗಿ ಸಂಪರ್ಕಿಸಲು ಕರ್ನಾಟಕ ಸಾಹಿತ್ಯ ಅಕಾಡೆವಮಿ ಪ್ರಕಟಣೆ ತಿಳಿಸಿದೆ.