ಪೇದೆಯಿಂದ ವೃದ್ಧನ ಮೇಲೆ ಹಲ್ಲೆ
ಚಿಕ್ಕಮಗಳೂರು: ಪಾನಮತ್ತನಾಗಿದ್ದ ಇಲ್ಲಿನ ಸಶಸ್ತ್ರ ಮೀಸಲು ಪಡೆಯ ಪೇದೆಯೋರ್ವ ವೃದ್ಧನ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಎಂ.ಜಿ. ರಸ್ತೆಯಲ್ಲಿ ಶನಿವಾರ ನಡೆದಿದೆ. ಪೇದೆ ನಾಗರಾಜ್ನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಸಂಜೆ ನಾಗರಾಜ್ ಇಲ್ಲಿನ ಎಂ.ಜಿ. ರಸ್ತೆಯಲ್ಲಿ ಮರ್ಲೆ ಹೊಸಕೋಟೆಯ ನಿವಾಸಿ ವೃದ್ಧ ಪುಟ್ಟರಾಜುಗೆ 100 ರುಪಾಯಿ ಕೊಡುವಂತೆ ಕೇಳಿದ್ದು, ಆಗ ಹಣವಿಲ್ಲವೆಂದು ಪುಟ್ಟರಾಜು ಹೇಳಿದಾಗ ಸಾರ್ವಜನಿಕರ ಎದುರಲ್ಲೇ ಹಲ್ಲೆ ನಡೆಸಿದ್ದಾನೆ. ಇದರಿಂದ ಕುಪಿತಗೊಂಡ ಸಾರ್ವಜನಿಕರು ನಾಗರಾಜ್ನನ್ನು ಥಳಿಸಿದ್ದಾರೆ.