ಪ್ಲಾಸ್ಟಿಕ್ ವಿರುದ್ಧ ಸಮರ
ಕ.ಪ್ರ.ವಾರ್ತೆ, ತರೀಕೆರೆ, ಜೂ.15
ಉತ್ತಮ ಪರಿಸರಕ್ಕೆ ಹಾನಿಯಾಗಿರುವ ಪ್ಲಾಸ್ಟಿಕ್ ಬಳಕೆ ವಿರುದ್ಧ ತರೀಕೆರೆ ಪುರಸಭೆ ವ್ಯಾಪಕ ಸಮರ ಸಾರಿದೆ.
ಪುರಸಭೆ ಸಿಬ್ಬಂದಿ ಪಟ್ಟಣದ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳಲ್ಲಿ, ಹೋಟೆಲ್, ವಾರದ ಸಂತೆ ಮಾಳದಲ್ಲಿ ಪ್ಲಾಸ್ಟಿಕ್ ಚೀಲ ಮತ್ತಿತರ ಪ್ಲಾಸ್ಟಿಕ್ ಪದಾರ್ಥಗಳನ್ನು ವಶಪಡಿಸಿಕೊಂಡು ಇನ್ನು ಮುಂದೆ ಪ್ಲಾಸ್ಟಿಕ್ ಮಾರಕೂಡದು ಮತ್ತು ಬಳಸಬಾರದು ಎಂದು ಮನವಿ ಮಾಡಿದೆ.
ಸ್ವಚ್ಛತೆ ಕಾಪಾಡಲು ಮನವಿ: ಮುಖ್ಯಾಧಿಕಾರಿ ಪಲ್ಲವಿ ಮಾತನಾಡಿ, ಪಟ್ಟಣದ ಎಲ್ಲ ಹೋಟೆಲ್, ವಿವಿಧ ಪಲಹಾರ ಮಂದಿರಗಳು ಸ್ವಚ್ಛತೆ ಕಾಪಾಡಬೇಕೆಂದು, ಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡಬೇಕೆಂದು ಸೂಚಿಸಲಾಗಿದೆ ಎಂದರು. ಆರೋಗ್ಯ ನಿರೀಕ್ಷಕ ಮಹೇಶ್, ಅಂಜನೇಯ, ಪುರಸಭೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.