ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೃಷಿ ಅರಣ್ಯ ಪ್ರೋತ್ಸಾಹ: ಕಾರ್ಯಾಗಾರ

Lingaraj Badiger
Updated On : 17 Jun 2013, 10:53 am

ಕ.ಪ್ರ.ವಾರ್ತೆ, ತರೀಕೆರೆ, ಜೂ.16
ರೈತರು ತಮ್ಮ ತೋಟ ಜಮೀನು ಹೊಲ ಗದ್ದೆಗಳಲ್ಲಿ ಕೃಷಿಗೆ ಸಂಬಂಧಿಸಿದ ಮರಗಿಡಗಳನ್ನು ಬೆಳೆಸಬೇಕೆಂದು ತರೀಕೆರೆ ಅರಣ್ಯ ವಲಯಾಧಿಕಾರಿ ಶ್ರೀರಂಗಸ್ವಾಮಿ ತಿಳಿಸಿದ್ದಾರೆ.
ಭದ್ರಾವತಿ ವಿಭಾಗ, ತರೀಕೆರೆ ವಲಯದ ಗ್ರಾಮೀಣ ಅರಣ್ಯ ಸಮಿತಿಯಿಂದ ಪಟ್ಟಣದ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಸಹಯೋಗದ ಅರಣ್ಯೀಕರಣ ಯೋಜನೆ ಅಂಗವಾಗಿ ಕೃಷಿಕರು ಮತ್ತು ಸ್ವಯಂ ಸೇವಾ ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ವಲಯ ಮಟ್ಟದ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜಮೀನಿನಲ್ಲೂ ಅರಣ್ಯ: ಅರಣ್ಯವನ್ನು ಕೇವಲ ಗುಡ್ಡಗಾಡುಗಳಲ್ಲಿ ಬೆಳೆಸಿದರೆ ಸಾಲದು,  ಅರಣ್ಯವನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಹಿಡುವಳಿ ಪ್ರದೇಶ, ಜಮೀನು ಸಾಗುವಳಿ
ಜಾಗ ಇತ್ಯಾದಿ ಕಡೆಗಳಲ್ಲೂ ವಿವಿಧ ಜಾತಿಯ ಮರಗಳನ್ನು ಬೆಳೆಸಿದರೆ ಅದರಿಂದ ಉತ್ತಮ ಪರಿಸರ ಕಾಪಾಡಿದಂತಾಗುತ್ತದೆ. ರೈತರು ಹಾಗೂ ಸಂಘ ಸಂಸ್ಥೆಗಳಿಗೆ ಅವರು ಬಯಸುವ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ ಮತ್ತು ಜಮೀನಿನಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ಸರ್ಕಾರದಿಂದ  ಪ್ರೋತ್ಸಾಹಿಸುವ ಸಲುವಾಗಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಎಂದರು.
75 ಸಾವಿರ ಗುರಿ: ಈ ಯೋಜನೆಯಲ್ಲಿ ಕಳೆದ ವರ್ಷ ತಾಲೂಕಿನಲ್ಲಿ 70 ಸಾವಿರ ವಿವಿಧ ಜಾತಿಯ ಮರ ಗಿಡಗಳನ್ನು ಪೋಷಿಸಲಾಗಿದ್ದು, ಈ ವರ್ಷ 75 ಸಾವಿರ ಮರ ಗಿಡಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ. ಜಮೀನಿನ ಬದುವಿನಲ್ಲಿ ನೀಲಗಿರಿ, ಅಕೇಶಿಯಾ ಬೆಳೆಸಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ಜಯ್ಯಣ್ಣ ಮಾತನಾಡಿ, ಇದೀಗ ಎಲ್ಲ ಕಡೆ ಅರಣ್ಯ ವ್ಯಾಪ್ತಿ ಕಡಿಮೆಯಾಗುತ್ತಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ವಿವಿಧ ಜಾತಿಯ  ಮರ ಗಿಡಗಳನ್ನು ಪ್ರಮಾಣಕ್ಕೆ ಅನುಗುಣವಾಗಿ ಸಸಿಗಳನ್ನು ಸಿದ್ದಪಡಿಸಿಟ್ಟುಕೊಳ್ಳಬಹುದು, ಸಸಿಗಳನ್ನು ಸರ್ಕಾರ ರಿಯಾಯಿತಿ ದರದಲ್ಲಿ ವಿತರಿಸುತ್ತದೆ ಎಂದರು.
ಹೆಚ್ಚು ಆದಾಯ: ತೋಟ ಜಮೀನು ಹೊಲ ಇತ್ಯಾದಿ ಕೃಷಿ ಭೂಮಿಯಲ್ಲಿ ವಿವಿಧ ಮರ ಗಿಡಗಳನ್ನು ಬೆಳೆಸುವುದರಿಂದ ಅರಣ್ಯದ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ರೈತರಿಗೆ ಹೆಚ್ಚು ಆದಾಯ ಬರುತ್ತದೆ ಎಂದು ತಿಳಿಸಿದರು.
ಸಾವಯವ ಕೃಷಿಕ ವೀರಣ್ಣ, ಆರ್. ರಾಮಚಂದ್ರಪ್ಪ, ಶ್ರೀಗಂಧ ಬೆಳೆಗಾರ ವಿಶುಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement