ಪದಾಧಿಕಾರಿಗಳ ಆಯ್ಕೆ
ಬಾಳೆಹೊನ್ನೂರು: ಸಮೀಪದ ಜಯಪುರ ರೋಟರಿ ಕ್ಲಬ್‌ಗೆ 2013-14ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಹುಮಾಯೂನ್ ಕಬೀರ್, ಕಾರ್ಯದರ್ಶಿಯಾಗಿ ಕೆ.ವೇಣುಗೋಪಾಲ್ ಆಯ್ಕೆಗೊಂಡಿದ್ದಾರೆ. ಮೋಹನ್, ಶ್ರೀಕರ, ಎಚ್. ಕಾರ್ತಿಕ್, ರಾಜೇಂದ್ರ, ಗೋಪಾಲಕೃಷ್ಣ, ಕೇಶವಮೂರ್ತಿ, ಜಯರಾಜ್, ರಾಮಲಿಂಗಂ, ನಾಗಭೂಷಣ್, ಜಯಂತ್, ಮಂಜುನಾಥ್ ವಿವಿಧ ಸಮಿತಿಗಳ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
25 ರಂದು ಸಮೀಪದ ಲೋಕನಾಥಪುರದ ಪಿಸಿಎಆರ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.