ಮದ್ಯವರ್ಜನ ಶಿಬಿರ
ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಮೇಗುಂದಾ ಹೋಬಳಿಯ ಹೆಗ್ಗಾರುಕೊಡಿಗೆ ಶ್ರೀ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 597ನೇ ಮದ್ಯವರ್ಜನ ಶಿಬಿರ ಇತ್ತೀಚೆಗೆ ಆರಂಭಗೊಂಡಿತು. ಈ ಶಿಬಿರ ಜೂ. 21ರವರೆಗೆ ನಡೆಯಲಿದ್ದು, ಶಿಬಿರದಲ್ಲಿ ಮದ್ಯವ್ಯಸನಿಗಳನ್ನು ಮದ್ಯಮುಕ್ತಗೊಳಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲ್ಲೂಕುಗಳಿಂದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಸಲಹೆ, ಮಾಹಿತಿ ನೀಡಲಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಸಮೀಪದ ಜಯಪುರ ರೋಟರಿ ಕ್ಲಬ್‌ಗೆ 2013-14ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಹುಮಾಯೂನ್ ಕಬೀರ್, ಕಾರ್ಯದರ್ಶಿಯಾಗಿ ಕೆ.ವೇಣುಗೋಪಾಲ್ ಆಯ್ಕೆಗೊಂಡಿದ್ದಾರೆ. ಮೋಹನ್, ಶ್ರೀಕರ, ಎಚ್. ಕಾರ್ತಿಕ್, ರಾಜೇಂದ್ರ, ಗೋಪಾಲಕೃಷ್ಣ, ಕೇಶವಮೂರ್ತಿ, ಜಯರಾಜ್, ರಾಮಲಿಂಗಂ, ನಾಗಭೂಷಣ್, ಜಯಂತ್, ಮಂಜುನಾಥ್ ವಿವಿಧ ಸಮಿತಿಗಳ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. 25 ರಂದು ಸಮೀಪದ ಲೋಕನಾಥಪುರದ ಪಿಸಿಎಆರ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪೌಷ್ಟಿಕ ಆಹಾರ ಅಗತ್ಯ
ಶೃಂಗೇರಿ: ಅಪೌಷ್ಟಿಕತೆಯಿಂದ ದೈಹಿಕ ಕುಂಠಿತ, ಅನೇಕ ಖಾಯಿಲೆಗಳಿಗೆ ಕಾರಣವಾಗುತ್ತದೆ. ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅಗತ್ಯವಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎಸ್. ಸುಧಾಕರ್ ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಬೆಗಳೂರಿನ ದಿ ಹಂಗರ್ ಪ್ರಾಜೆಕ್ಟ್, ವಿಕಸನ ಸಂಸ್ಥೆ, ಗ್ರಾಪಂಗಳ ಚುನಾಯಿತ ಮಹಿಳಾ ಒಕ್ಕೂಟಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಅಪೌಷ್ಟಿಕತೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ಆರೋಗ್ಯದಲ್ಲಿ ಏರುಪೇರಾಗಲು ಪೌಷ್ಟಿಕ ಆಹಾರ ಕೊರತೆ ಕಾರಣ ಎಂದರು. ದೀಪ ಕಾರ್ಯಕ್ರಮದಲ್ಲಿ ಇದ್ದರು.