'ಸಿಎಂ ಜತೆ ಚರ್ಚಿಸಿ ಸಮಸ್ಯೆ ಪರಿಹಾರ'
ಮೂಡಿಗೆರೆ: ಕ್ಷೇತ್ರದಲ್ಲಿ ಭುಗಿಲೆದ್ದಿರುವ ನಿವೇಶನ, ಒತ್ತುವರಿ, ಆನೆ ಹಾವಳಿ, ಇನಾಂ ಭೂಮಿ ಸಹಿತ ಬಹುತೇಕ ಸಮಸ್ಯೆಗಳಿಗೆ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲು ಚಿಂತಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎನ್. ಚಂದ್ರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನ ಈ ಕ್ಷೇತ್ರದಲ್ಲಿ ಹಲವು ವರ್ಷಂದಿಂದ ಅನೇಕ ಸಮಸ್ಯೆಗಳು ಇತ್ಯರ್ಥಗೊಳ್ಳದೇ ಬಾಕಿ ಉಳಿದಿವೆ. ಅರಣ್ಯ ಮತ್ತು ಕಂದಾಯ ಭೂಮಿ ನಡುವಿನ ಅಧಿಕಾರಿಗಳ ಗೊಂದಲದಿಂದ ರೈತರು ಮತ್ತು ಬೆಳೆಗಾರರನ್ನು ಪಾರು ಮಾಡಲು ಅಗತ್ಯ ಕ್ರಮ ಜರುಗಿಸಬೇಕಿದೆ ಎಂದರು.
ತೀವ್ರ ತೊಂದರೆ: 1998ರಿಂದ ನಿವೇಶನ ಹಂಚಿಕೆ ನಡೆಯದಿರುವುದರಿಂದ ಬಡವರಿಗೆ ತೀವ್ರ ತೊಂದರೆ ಎದುರಾಗಿದೆ. ಪ್ರತಿ ಗ್ರಾಪಂ ವ್ಯಾಪ್ತಿಗಳಲ್ಲಿ ನಿವೇಶನ ರಹಿತರಿಗೆ ಅರ್ಹ ರೀತಿಯಲ್ಲಿ ನಿವೇಶನ ಹಂಚಿಕೆಗೆ ಸರ್ಕಾರಿ ಮಟ್ಟದ ಕಾನೂನು ತೊಡಕುಗಳಿಗೆ ಅತೀ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು ಎಂದವರು ಹೇಳಿದರು.
ಕಳಸ ಇನಾಂ ಭೂಮಿ ವಿಚಾರದಲ್ಲಿ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್ಗಳಿಗೆ ಸರ್ಕಾರ ಸಮರ್ಪಕ ದಾಖಲೆ ಒದಗಿಸಲು ಸರ್ಕಾರ ಸಕಲ ಸಿದ್ಧತೆ ನಡೆಸಲಿದೆ ಎಂದಿರುವ ಅವರು, ಗ್ರಾಮೀಣ ಪ್ರದೇಶಗಳು ಮತ್ತು ಪಟ್ಟಣಗಳಿಗೆ ಮೂಲ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಲಿರುವ ವಿಘ್ನ ನಿವಾರಿಸಲಾಗುವುದು ಎಂದರು.
ವ್ಯಾಪಕ ದೂರು: ತಾಲೂಕು ಕೇಂದ್ರದಲ್ಲಿ ಬೃಹತ್ ಆಸ್ಪತ್ರೆ ಇದೆಯಾದರೂ ವೈಧ್ಯರು ಮತ್ತು ಸಿಬ್ಬಂದಿಗಳಿಲ್ಲದ ಬಗ್ಗೆ ವ್ಯಾಪಕ ದೂರು ವ್ಯಕ್ತವಾಗುತ್ತಿವೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಗಮನ ಸೆಳೆದು ಸಮಸ್ಯೆ ಪರಿಹರಿಸಲಾಗುವುದು. ಅಲ್ಲದೇ ವಿದ್ಯುತ್ ಸಮಸ್ಯೆಗೆ ಆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಿಸುವುದರಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕ್ಷೇತ್ರದಲ್ಲಿ ಪ್ರತಿ ಇಲಾಖೆಗಳಲ್ಲಿ ಭ್ರಷ್ಟಾಚಾರ ರಹಿತವಾಗಿ ಸಕಾಲದಲ್ಲಿ ಜನರ ಕೆಲಸ ಮಾಡಿಕೊಡುವಂತೆ, ಆಡಳಿತದಲ್ಲಿ ಚುರುಕು ತರುವಂತೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಅರ್ಜಿ ಆಹ್ವಾನ
ಶಿವಮೊಗ್ಗ: ಭದ್ರಾವತಿ ಬೊಮ್ಮನಕಟ್ಟೆಯ ಸರ್.ಎಂ.ವಿ. ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಥಮ ಬಿ.ಎಸ್ಸಿ, ಬಿ.ಸಿ.ಎ, ಪದವಿ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಕಿಈಂ, ಕಿಂಈಖ, ಈಇಘಿ, ಘಿಈಇಖಿ, ಇಈಂಇ, ಇಈಆ ವಿಷಯಗಳಲ್ಲಿ ಪ್ರತ್ಯೇಕವಾಗಿ ಪ್ರವೇಶ ಪಡೆಯಬಹುದು. ಸುಸಜ್ಜಿತ ಪ್ರಯೋಗಾಲಯ ಹೊಂದಿರುವ ಈ ವಿದ್ಯಾನಿಲಯವು ನ್ಯಾಕ್ನಿಂದ ನೀಡಲಾಗುವ ಬಿ ಶ್ರೇಣಿ ಮಾನ್ಯತೆ ಹೊಂದಿದೆ.