ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

22ರಂದು ಹೃದ್ರೋಗ, ಮಧುಮೇಹ ತಪಾಸಣಾ ಶಿಬಿರ

Lingaraj Badiger
Updated On : 18 Jun 2013, 11:17 am

ಚಿಕ್ಕಮಗಳೂರು: ರೋಟರಿ ಕಾಫಿಲ್ಯಾಂಡ್ ಸ್ಕ್ಲಾಬ್ ಹಾಗೂ ಪೂಜಾ ಹೆಲ್ತಕೇರ್ ಸಹಯೋಗದೊಂದಿಗೆ ಜೂ.22 ರಂದು ಉಚಿತ ಹೃದ್ರೋಗ ಮತ್ತು ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 8.30 ರಿಂದ ಸಂಜೆ 5 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಮೊದಲು ಹೆಸರು ನೋಂದಾವಣೆ ಮಾಡಿದ 150 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿನ ನಾರಾಯಣ ಹೃದಯಾಲಯದ ತಜ್ಞ ವೈದ್ಯ ಡಾ. ನಾರಾಯಣ ಮೂರ್ತಿ (ಕಾರ್ಡಿಯಾಲಾಜಿಸ್ಟ್) ಮತ್ತು ಡಾ. ಪ್ರತಿಮಾ ಮೂರ್ತಿ (ಡೈಯಾಬಿಟಾಲಾಜಿಸ್ಟ್) ಪೂಜಾ ಹೆಲ್ತ್‌ಕೇರ್ ಮುಖ್ಯಸ್ಥ ಡಾ. ಶಶಿಧರ್ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಉಚಿತವಾಗಿ ಮಧುಮೇಹ ಪರೀಕ್ಷೆ, ಇಸಿಜಿ ಮತ್ತು ತಜ್ಞವೈದ್ಯರ ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗಿದೆ.
ತಪಾಸಣೆಗೆ ಒಳಗೊಂಡವರಲ್ಲಿ ಹೆಚ್ಚಿನ ತಪಾಸಣೆ ಅವಶ್ಯಕತೆ ಇದ್ದಲ್ಲಿ ಶೇ. 50ರ ವಿಶೇಷ ರಿಯಾಯ್ತಿ ಲಭ್ಯವಿದೆ.
  ಆಸಕ್ತರು ಪೂಜಾ ಹೆಲ್ತಕೇರ್, ಮಲ್ಲಂದೂರು ವೃತ್ತ, ಆಂಜನೇಯ ದೇವಸ್ಥಾನ ರಸ್ತೆ, ವಿಜಯಪುರ, ಚಿಕ್ಕಮಗಳೂರು ಇಲ್ಲಿ ಹೆಸರು ನೋಂದಾಯಿಸಬಹುದು ಎಂದು ಡಾ. ಸುನಿತಾ ಶಶಿಧರ್ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement