ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದಲಿತರ ಸಮಸ್ಯೆ ಬಗೆಹರಿಸಲು ಮನವಿ

Lingaraj Badiger
Updated On : 18 Jun 2013, 11:17 am

ಕ.ಪ್ರ.ವಾರ್ತೆ, ತರೀಕೆರೆ, ಜೂ.17 ಜಿಲ್ಲೆಯ ದಲಿತ ಸಮಸ್ಯೆ ಬಗೆಹರಿಸಬೇಕು ಎಂದು ದಸಂಸ ಜಿಲ್ಲಾ ಶಾಖೆಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಅಭಯ ಚಂದ್ರ ಜೈನ್ ಅವರಿಗೆ ಪತ್ರ ಬರೆದು ಕೋರಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 40 ವರ್ಷದಿಂದ ದಲಿತರ ಸಮಸ್ಯೆಗೆ ನಿರಂತರ ಹೋರಾಟ ಮಾಡಿಕೊಂಡು ದಲಿತರ ಬೇಡಿಕೆ ಈಡೇರಿಕೆಗೆ ಸಂಘಟನೆ ತೊಡಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸಮಸ್ಯೆ ಈಡೇರಿಸಿಕೊಡಬೇಕು ಎಂದು ಅವರು ವಿನಂತಿಸಿದ್ದಾರೆ.
ದಲಿತರಿಗೆ ನೀಡಿ: ಜಿಲ್ಲಾದ್ಯಂತ ಒತ್ತುವರಿ ತೆರವಗೊಳಿಸುತ್ತಿದ್ದು ತೆರವುಗೊಳಿಸಿದ ಜಮೀನನ್ನು ಭೂಹೀನ ದಲಿತರಿಗೆ ನೀಡಬೇಕು ಮತ್ತು ಒತ್ತುವರಿ ಜಮೀನು ಮಂಜೂರಾತಿಯಲ್ಲಿ ಭೂಮಿತಿ ಕಾಯಿದೆ ಅನುಸರಿಸಬೇಕು. ಸಹಕಾರ ಸಂಘ ಸಂಸ್ಥೆಗಳ ನಿಗಮ ಮಂಡಳಿಗಳಿಗೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ವಂಚನೆಯಾಗುತ್ತಿದ್ದು, ಈ ಸಂದರ್ಭಗಳಲ್ಲಿ ಮೀಸಲಾತಿಯನ್ನು ನಿಗದಿಪಡಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೂ ಸಹಕಾರ ಸಂಸ್ಥೆಗಳಲ್ಲಿ ಪ್ರತಿನಿಧಿಸಲು ಅವಕಾಶ ಮಾಡಿಕೊಡಬೇಕು ಎಂದರು.
ಜಿಲ್ಲೆಯಲ್ಲಿ ಬುದ್ಧವಿಹಾರ ನಿರ್ಮಿಸಲು ಕನಿಷ್ಠ 25 ಎಕರೆ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಡಬೇಕು, ಜಿಲ್ಲೆಯಾದ್ಯಂತ ಸರ್ಕಾರಿ ಕಾಮಗಾರಿ ಗುತ್ತಿಗೆ ನೀಡುವಾಗ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೂ ಕಾಮಗಾರಿ ಸಿಗುವಂತೆ ಮೀಸಲಾತಿ ಪಾಲಿಸಬೇಕು ಎಂದವರು ಹೇಳಿದರು.
ಕಂಪೌಂಡ್ ಇಲ್ಲದ ಶಾಲೆ: ತರೀಕೆರೆ ತಾಲೂಕು ನಂದಿ ಬಟ್ಟಲು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ಕಾಂಪೌಂಡಿಲ್ಲದೆ, ಗುಡ್ಡದಲ್ಲಿರುತ್ತದೆ. ಕಾಡಿನ ಮಧ್ಯ ಇರುವ ಈ ಶಾಲೆಯ ಅಕ್ಕಪಕ್ಕದಲ್ಲಿಯೇ ಕಾಡು ಪ್ರಾಣಿಗಳು ಓಡಾಡುತ್ತಿದ್ದು, ವಿದ್ಯಾರ್ಥಿಗಳ ಜೀವಕ್ಕೆ ತೊಂದರೆಯಿದೆ. ಅತಿ ಶೀಘ್ರವಾಗಿ ಕಾಂಪೌಂಡ್ ನಿರ್ಮಾಣ ಮಾಡಬೇಕು, ಹಾಗು ಕಲ್ಲುಬಂಡೆಗಳಿಂದ ತುಂಬಿರುವ ಶಾಲಾ ಆವರಣವನ್ನು ಸಮತಟ್ಟು ಮಾಡಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement