ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬದಲಾವಣೆಗೆ ಯೋಜನೆ ಸಹಕಾರಿ

Lingaraj Badiger
Updated On : 18 Jun 2013, 11:17 am

ಕ.ಪ್ರ.ವಾರ್ತೆ ನರಸಿಂಹರಾಜಪುರ:
ಸೇವಾ ಕ್ಷೇತ್ರದಲ್ಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ  ವಿಶಿಷ್ಟವಾಗಿದ್ದು ಗ್ರಾಮೀಣ ಭಾಗದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿದೆ ಎಂದು ನರಸಿಂಹರಾಜಪುರ ಲಿಟಲ್ ಪ್ಲವರ್ ಚಚ್ ಧರ್ಮಗುರು ರೆ.ಫಾ. ಬಿಜೋಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಇತ್ತೀಚೆಗೆ ಮಹಾವೀರ ಭವನದಲ್ಲಿ ನಡೆದ ಧ.ಗ್ರಾ.ಯೋಜನೆಯ ನ.ರಾ.ಪುರ ಮತ್ತು ನಾಗಲಾಪುರ ಕಾರ್ಯಕ್ಷೇತ್ರದ ಎ ಮತ್ತು ಬಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭ  ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ ಸ್ವಾವಲಂಬನೆ: ರಾಜ್ಯ ಸರ್ಕಾರ ಮಾಡದ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಧ.ಗ್ರಾ. ಯೋಜನೆ ಮಾಡುತ್ತಿದೆ. ಗ್ರಾಮೀಣ ಭಾಗದ ಜನರು ಯೋಜನೆಯ ಲಾಭ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಸಂಘಟನೆ ಏಕಕಾಲದಲ್ಲಿ ನಡೆಯುತ್ತಿದೆ ಎಂದವರು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ, ಶೃಂಗೇರಿ ಹಾಗೂ ನ.ರಾ. ಪುರ ತಾಲೂಕುಗಳ ಯೋಜನಾಧಿಕಾರಿ ಉಮಾವತಿ ಮಾತನಾಡಿ ಯೋಜನೆಯ ಬಗ್ಗೆ ಪರಿಚಯಿಸಿದರು.
ನಿವೃತ್ತ ಕನ್ನಡ ಪಂಡಿತ ವಿ.ಎಸ್. ಕೃಷ್ಣಭಟ್ ಮಾತನಾಡಿ, ಧ.ಗ್ರಾ. ಯೋಜನೆಯು ಧರ್ಮದ ತಳಹದಿಯಲ್ಲಿ ಯಶಸ್ವಿಯಾಗುತ್ತಿದೆ. ಗುರಿ ತಲುಪುವ ದೃಷ್ಟಿಯಿಂದ ಮುನ್ನೆಡೆಯುತ್ತಿರುವ ಧ.ಗ್ರಾ. ಯೋಜನೆ ಉನ್ನತಿ ಹೊಂದುವುದರಲ್ಲಿ ಅನುಮಾನವೇ ಇಲ್ಲ ಎಂದರು. ಅಧ್ಯಕ್ಷತೆಯನ್ನು ಧ.ಗ್ರಾ.ಯೋಜನೆಯ ನ.ರಾ.ಪುರ ಕಾರ್ಯಕ್ಷೇತ್ರದ ಎ ಒಕ್ಕೂಟದ ಪ್ರಗತಿ ಬಂಧು ಸ್ವಸಹಾಯ ಸಂಘದ ಅಧ್ಯಕ್ಷೆ ಎಂ. ಶಶಿಕಲಾ ವಹಿಸಿದ್ದರು. ಸಾಹಿತಿ ಎಂ. ಜಯಮ್ಮ, ಸ.ಪ್ರ.ದ. ಕಾಲೇಜು  ಉಪನ್ಯಾಸಕ ಎಚ್.ಎಚ್. ಜಲೇಂದ್ರ, ನಾಗಲಾಪುರ ಎ. ಒಕ್ಕೂಟದ ನೂತನ ಅಧ್ಯಕ್ಷ ಜಯರಾಂ, ಹಿಂದಿನ ಸಾಲಿನ ಅಧ್ಯಕ್ಷ ಲಕ್ಷ್ಮಣ್, ಬಿ. ಒಕ್ಕೂಟದ ನೂತನ ಅಧ್ಯಕ್ಷರಾದ ಭಾರತಿ, ಹಿಂದಿನ ಸಾಲಿನ ಅಧ್ಯಕ್ಷ ಕೃಷ್ಣಮೂರ್ತಿ, ನರಸಿಂಹರಾಜಪುರ ಎ. ಒಕ್ಕೂಟದ ಅಧ್ಯಕ್ಷೆ ಜರೀನಾಬಾನು, ಬಿ. ಒಕ್ಕೂಟದ ಅಧ್ಯಕ್ಷ ಹಸನ್, ಮೇಲ್ವೀಚಾರಕ ಗಣೇಶ್,ಸೇವಾ ಪ್ರತಿನಿಧಿಗಳಾದ ಲಾಲಿ, ಅನ್ನಪೂರ್ಣ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement