ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇಂಗ್ಲಿಷ್ ಮಾಧ್ಯಮ ತರಗತಿಗೆ ಚಾಲನೆ

Vishwanath S
Updated On : 19 Jun 2013, 12:33 pm

ಕ.ಪ್ರ. ವಾರ್ತೆ, ತರೀಕೆರೆ, ಜೂ.18
ಸಮೀಪದ ಹುಣಸಘಟ್ಟ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಪ್ರಾರಂಭಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಜಿಪಂ ಸದಸ್ಯೆ ವಿಶಾಲ ತಿಪ್ಪೇಶಪ್ಪ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ಪರಮೇಶ್ಮರಪ್ಪ ಶಾಲೆಯ 8ನೇ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಶಾಲೆಯಲ್ಲಿ
ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುವಂತೆ, ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಲಾಗಿದ್ದು, ಇದೀಗ 8ನೇ ತರಗತಿಯಲ್ಲೂ ವಿಸ್ತರಿಸಲಾಗಿದೆ ಎಂದು ಹೇಳಿದರು.
ಈ ಶಾಲೆಗೆ ಇಲಾಖೆಯಿಂದ ಬರುವ ಅನುದಾನವನ್ನು ವಿತರಿಸಲಾಗುವುದು, ಶಾಲೆಗೆ ನುರಿತ ಇಂಗ್ಲಿಷ್ ಶಿಕ್ಷಕರನ್ನು  ನಿಯೋಜಿಸಲಾಗುವುದು, ಮುಂದೆ ಶಾಶ್ವತವಾಗಿ ಪ್ರೌಢಶಾಲಾ ಶಿಕ್ಷಕರನ್ನು ಹಾಕಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ತಾಪಂ ಸದಸ್ಯೆ ರೇಖಾ ಜಯ್ಯಣ್ಣ ಮಾತನಾಡಿ, ಮಕ್ಕಳ ಪ್ರಗತಿಗೆ ನುರಿತ ಶಿಕ್ಷಕರು ಅಗತ್ಯವಾಗಿದೆ ಎಂದು ತಿಳಿಸಿದರು. ಶಾಲೆ  ಎಸ್‌ಡಿಎಂಸಿಮಾಜಿ ಅಧ್ಯಕ್ಷ ರಮೇಶಪ್ಪ ಮಾತನಾಡಿ, ಶಾಲೆ ಅಭಿವೃದ್ಧಿಗೆ ಜಿಪಂ ಸದಸ್ಯರು ಮತ್ತು ತಾಪಂ ಸದಸ್ಯರು ಹೆಚ್ಚು ಅನುದಾನ ನೀಡಬೇಕು ಎಂದು ತಿಳಿಸಿದರು.
ಮುದುಗುಂಡಿ ಲೋಹಿತ್, ಎಸ್‌ಡಿಎಂಸಿ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement