ಕಡಿಮೆ ದರದಲ್ಲಿ ಔಷಧಿ ಮಾರಾಟ
ಚಿಕ್ಕಮಗಳೂರು: ಕಡಿಮೆ ದರದಲ್ಲಿ ಔಷಧಿ ಮಾರಾಟ ಮಾಡುವ ಕೇಂದ್ರಗಳು (ಜನರಿಕ್ ಮೆಡಿಷನ್ ಔಟ್ಲೆಟ್ಗಳನ್ನು) ಪ್ರತಿ ತಾಲೂಕು ಕೇಂದ್ರಗಳಲ್ಲಿ ತೆರೆಯುವ ಆಲೋಚನೆ ಸರ್ಕಾರ ಹೊಂದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಈ ಸಂಬಂಧ ಮುಂದಿನ ಬಜೆಟ್ನಲ್ಲಿ ಪ್ರಸ್ತಾವನೆ ಇಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರ ಆರ್ಥಿಕ ಪರಿಸ್ಥಿತಿ ನೋಡಿ, ಇನ್ನು 2- 3 ಯೋಜನೆಗಳನ್ನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ನಕ್ಸಲ್ ಪೀಡಿತ ಪ್ರದೇಶದಲ್ಲಿ ಹಾಲಿ ಇರುವ ಸಂಚಾರಿ ಆರೋಗ್ಯ ಸೇವೆ ಮುಂದುವರೆಸಲಾಗುವುದು ಎಂದು ಹೇಳಿದರು. ಕಳೆದ ಒಂದು ತಿಂಗಳಲ್ಲ 1400 ಮಂದಿ ಡೆಂಘೀಯಿಂದ ಬಳಸುತ್ತಿದ್ದಾರೆ. 4 ಜನ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.