ಇಂದು ರಬ್ಬರ್ ಗುಣ ಮಟ್ಟದ ಅಭಿಮಾನ
ನರಸಿಂಹರಾಜಪುರ: ತಾಲೂಕು ರಬ್ಬರ್ ಉತ್ಪಾದಕರ ಸಂಘ ಹಾಗೂ ತಾಲೂಕು ರಬ್ಬರ್ ಮಂಡಲಿಯ ಸಂಯುಕ್ತ ಆಶ್ರಯದಲ್ಲಿ ರಬ್ಬರ್ ಗುಣ ಮಟ್ಟದ ಅಭಿಮಾನ ಕಾರ್ಯಕ್ರಮವು ಜೂನ್ 20 ರಂದು ಮಧ್ಯಾಹ್ನ 2 ಗಂಟೆಗೆ ಅಗ್ರಹಾರದ ಸುಬ್ಬಣ್ಣ ನಾಡಿಗ್ ಅವರ ಮನೆಯ ಮಹಡಿಯಲ್ಲಿ ನಡೆಯಲಿದೆ ಎಂದು ತಾಲೂಕು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಕೆ. ಜಾನಕೀರಾಮ್ ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಕೆ. ಜಾನಕಿರಾಮ್ ವಹಿಸಲಿದ್ದಾರೆ. ಅತಿಥಿಗಳಾಗಿ ಕುಂದಾಪುರದ ರಬ್ಬರ್ ಮಂಡಳಿಯ ಡೆಪ್ಯೂಟಿ ರೀಜನಲ್ ಪ್ರೊಡಕ್ಷನ್ ಕಮೀಷನರ್ ಡಿ. ನಾರಾಯಣ ಸ್ವಾಮಿ, ಕುಂದಾಪುರದ ರಬ್ಬರ್ ಮಂಡಳಿಯ ಡೆವಲೆಪ್ ಮೆಂಟ್ ಆಫೀಷರ್ ಎನ್.ಸಿ.ಸಿ. ಜೋಸ್, ಕಂದಾಪುರದ ರಬ್ಬರ್ ಮಂಡಳಿಯ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಎಸ್. ಗೀತಾ, ನರಸಿಂಹರಾಜಪುರ ರಬ್ಬರ್ ಬೋರ್ಡ್ನ ಅಭಿವೃದ್ಧಿ ಅಧಿಕಾರಿ ದಿಲೀಪ್ ಕುಮಾರ್ ಉಪಸ್ಥಿತರಿರುವರು.
ಸಂಭೆಯಲ್ಲಿ ರಬ್ಬರ್ ಮಂಡಳಿಯಿಂದ ದೊರಕುವ ಸೌಲಭ್ಯಗಳು, ಹೊಸ ರಬ್ಬರ್ ತಳಿಗಳು, ಗುಣ ಮಟ್ಟದ ರಬ್ಬರ್ ಶೀಟ್ ಉತ್ಪಾದನೆ, ಉನ್ನತ ಟ್ಯಾಪಿಂಗ್ ಮಾಡುವ ಬಗ್ಗೆ ವಿಶೇಷ ಮಾಹಿತಿ, ರಬ್ಬರ್ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ತಾಲೂಕಿನ ಎಲ್ಲಾ ರಬ್ಬರ್
ಬೆಳೆಗಾರರು ಈ ಸಭೆಗೆ ಆಗಮಿಸಬೇಕು ಎಂದು ತಾಲೂಕು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಕೆ. ಜಾನಕೀ ರಾಂ ಮನವಿ ಮಾಡಿದ್ದಾರೆ.