ಸೈಬರ್ ಸೇವಾ ಕೇಂದ್ರದಲ್ಲೇ ಪಡಿತರ ಅರ್ಜಿ ಸಲ್ಲಿಸಿ
ಕಡೂರು: ತಾಲೂಕಿನ ಜನತೆ ಸರ್ಕಾರವು ನೇಮಕ ಮಾಡಿರುವ ಸೈಬರ್ ಸೇವಾ ಕೇಂದ್ರಗಳಲ್ಲಿಯೇ ಆನ್‌ಲೈನ್‌ನಲ್ಲಿ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ, ಪಡಿತರ ಚೀಟಿಯಲ್ಲಿ ಅಗತ್ಯವಿರುವ ಬದಲಾವಣೆ ಮತ್ತು ನವೀಕರಿಸುವ ಸೇವೆಯ ನೊಂದಣಿ ಮಾಡಿಸಬೇಕು ಎಂದು ಆಹಾರ ಮತು ನಾಗರೀಕ ಸರಬರಾಜು ಇಲಾಖೆಯು ಅನುಮತಿ ನೀಡಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
ಈ ಬಗ್ಗೆ ತಹಸೀಲ್ದಾರರ ಪರವಾಗಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ತಾಲೂಕು ಶಿರಸ್ತೇದಾರ್ ರಂಗನಾಥ್, ಕಡೂರು ತಾಲೂಕಿನ ಕಡೂರು ಪಟ್ಟಣದಲ್ಲಿ ಪಡಿತರ ಚೀಟಿ ನೊಂದಣಿ, ಬದಲಾವಣೆ ಮತ್ತು ತಿದ್ದುಪಡಿಗೆ 7 ಸೈಬರ್ ಸೇವಾ ಕೇಂದ್ರಗಳನ್ನು ಮತ್ತು ಬೀರೂರು ಪಟ್ಟಣದಲ್ಲಿ 2 ಸೈಬರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಿದೆ ಎಂದರು. ಮೇಲ್ಕಂಡ ಸೌಲಭ್ಯವನ್ನು ಒದಗಿಸುವ ಸೇವಾ ಕೇಂದ್ರಗಳಿಗೆ ನೊಂದಣಿಗೆ ಒಬ್ಬ ವ್ಯಕ್ತಿಯು 50 ರೂ ನೀಡುವಂತೆ ನಿಗದಿಪಡಿಸಿದೆ ಎಂದು ತಿಳಿಸಿದ್ದಾರೆ. ಆಹಾರ ಶಿರಸ್ತೇದಾರ್ ಚಂದ್ರಮೂರ್ತಿ ಇದ್ದರು.
ಸಿದ್ದರಾಮ ಜಯಂತಿ
ಕಡೂರು: 841 ನೇ ಸಿದ್ದರಾಮ ಜಯಂತಿಯು ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ 2014 ರ ಜನವರಿ 14 ಮತ್ತು 15 ರಂದು ನಡೆಯಲಿದೆ. ಕಡೂರು ಪಟ್ಟಣದ ಕೆ. ಹೊಸಳ್ಳಿಯ ಯಳನಡು ಮಠದಲ್ಲಿ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ತಿಳಿಸಿದ ನೊಣಂಬ ವೀರಶೈವ ಸಮಾಜದ ಮುಖಂಡ ಹಾಗು ತರೀಕೆರೆಯ ಮಾಜಿ ಶಾಸಕನಾಗರಾಜ್, ಸಿದ್ದರಾಮರ ಜಯಂತಿಯನ್ನು ಆಚರಿಸಲು ನಿರ್ಧರಿಸಿದ್ದೇವೆ ಎಂದರು.