ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಉಚಿತ ನೇತ್ರ ತಪಾಸಣಾ ಶಿಬಿರ

Lingaraj Badiger
Updated On : 21 Jun 2013, 11:02 am

ಬೀರೂರು: ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ ಮತ್ತು ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಸಂಘದ ಆವರಣದಲ್ಲಿ ಸದಸ್ಯರಿಗೆ ಎರಡು ದಿನಗಳ ಉಚಿತ ಕಣ್ಣು ತಪಾಸಣಾ ಶಿಬಿರ ಆರಂಭಗೊಂಡಿತು.
 ಶಂಕರ್ ಕಣ್ಣಿನ ಆಸ್ಪತ್ರೆಯ ಹಿರಿಯ ನೇತ್ರ ತಜ್ಞ ಡಾ. ವೀಣಾ ಮಾತನಾಡಿ, ಆಸ್ಪತ್ರೆಯಿಂದ ಹಮ್ಮಿಕೊಂಡಿರುವ ಕಣ್ಣು ಸಂರಕ್ಷಣೆಯ ಕಾರ್ಯಕ್ರಮಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದ ಮಾಹಿತಿ ನೀಡಿ, ಅತ್ಯಂತ ಕಾಳಜಿಯಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಸೇವೆ ಹಾಗೂ ಚಿಕಿತ್ಸೆ ನೀಡುತ್ತಿದ್ದೇವೆ. ಮಕ್ಕಳಲ್ಲಿ ವಿಟಮಿನ್ ಎ ಕೊರತೆಯಿಂದ ಇರುಳುಗಣ್ಣು, ಮೆಳ್ಳೆಗಣ್ಣು ದೋಷ ಕಂಡು ಬರುತ್ತದೆ. ಬಾಲ್ಯದಲ್ಲಿಯೇ ಈ ದೋಷ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದಲ್ಲಿ ಕಣ್ಣಿನ ರಕ್ಷಣೆ ಜೊತೆ ಅಂಧತ್ವ ತಡೆಯಬಹುದು. 12ರಿಂದ 16 ವರ್ಷದ ಮಕ್ಕಳಲ್ಲಿನ ದೃಷ್ಟಿ ದೋಷದ ಬಗ್ಗೆ ಜಾಗೃತಿ ಅಗತ್ಯ. 40 ವರ್ಷ ಮೇಲ್ಪಟ್ಟವರು, ಮಧು ಮೇಹದಿಂದ ಬಳಲುತ್ತಿರುವವರು, ದೃಷ್ಟಿ ದೋಷ ಉಳ್ಳವರು ನೇತ್ರ ತಪಾಸಣೆ ಮಾಡಿಸಿಕೊಳ್ಳುವುದು, ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.
 ಶಂಕರ್ ಕಣ್ಣಿನ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಹೇಶ್ ಮಾತನಾಡಿ, ಟ್ರಸ್ಟ್‌ನಿಂದ ಕೈಗೊಂಡಿರುವ ಆರೋಗ್ಯ ಸಂರಕ್ಷಣೆಯ ಕಾರ್ಯಕ್ರಮಗಳು ಸೇವಾ ಸಂಸ್ಥೆಗಳ ಮಾಹಿತಿ ನೀಡಿ, 8 ರಿಂದ 10 ಜಿಲ್ಲೆಗಳ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಜನರಿಗೆ ಉಚಿತ ಚಿಕಿತ್ಸಾ ಸೌಲಭ್ಯ ದೊರಕುತ್ತಿದೆ ಎಂದರು.  ಮ್ಯಾಮ್ಕೋಸ್ ಸಂಸ್ಥೆಯ ವ್ಯವಸ್ಥಾಪಕ ಮುರುಗೇಶ್ ಮಾತನಾಡಿ, ಬೀರೂರಿನಲ್ಲಿ 680 ನೊಂದಾಯಿತ ಸದಸ್ಯರಿದ್ದು ಸಾಕಷ್ಟು ಜನರಿಗೆ ಈ ಶಿಬಿರದ ಸೌಲಭ್ಯ ದೊರಕುತ್ತಿದೆ. 3 ವರ್ಷದಿಂದ ಸದಸ್ಯರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement