ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಂದಾಯ ಪಾವತಿ ಕಡ್ಡಾಯ ಬೇಡ: ಸೂಚನೆ

Lingaraj Badiger
Updated On : 21 Jun 2013, 11:03 am

ಮೂಡಿಗೆರೆ: ಪಡಿತರ ಚೀಟಿ ನವೀಕರಣಕ್ಕೆ ಬಾಕಿ ಉಳಿದಿರುವ ಮನೆ, ನೀರಿನ ಕಂದಾಯ, ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಕಡ್ಡಾಯಗೊಳಿಸಿಲ್ಲಾ ಎಂದು ತಹಶೀಲ್ದಾರ್ ಎ.ವಿ.ರುದ್ರಪ್ಪಾಜಿ ರಾವ್ ತಿಳಿಸಿದರು.
 ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪಂಚಾಯಿತ್‌ಅಭಿವೃದ್ದಿ ಅಧಿಕಾರಿಗಳ ಸಭೆಯಲ್ಲಿ ವಿಚಾರವನು ಪ್ರಸ್ತಾಪಿಸಿ, ಪಂಚಾಯಿತಿ ಅಧಿಕಾರಿಗಳು ಪಡಿತರ ಚೀಟಿದಾರರ ಬಾಕಿ ತೆರಿಗೆಯನ್ನು ಏಕಕಾಲದಲ್ಲಿ ಪಾವತಿ ಮಾಡುವಂತೆ ಒತ್ತಾಯಿಸದೆ, ಪಾವತಿ ಮಾಡಿರುವ ರಶೀದಿ ಪಡೆದು ಪಡಿತರ ನವೀಕರಣ ಮಾಡುವಂತೆ ತಿಳಿಸಿದರು.
 ತಹಸೀಲ್ದಾರರ ಮಾತಿಗೆ ಹಲವು ಗ್ರಾ.ಪಂ. ಪಿಡಿಓ ಮತ್ತು ಅಧ್ಯಕ್ಷರು ಆಕ್ಷೇಪ ವ್ಯಕ್ತ ಪಡಿಸಿದಾಗ ಮಧ್ಯೆ ಪ್ರವೇಶಿಸಿದ ಶಾಸಕ ಬಿ.ಬಿ.ನಿಂಗಯ್ಯ,  ಈಗ ಮಳೆಗಾಲ ಆರಂಭವಾಗಿದ್ದು. ರೈತರು ಮತ್ತು ಕಾರ್ಮಿಕರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ದಾಖಲು ಮಾಡುವ ಸಮಯದಲ್ಲಿ ಬಾಕಿ ತೆರಿಗೆಯನ್ನು ಪಾವತಿಸುವಂತೆ ಕಡ್ಡಾಯಗೊಳಿಸದೇ. ಪ್ರತಿ ವರ್ಷ ಕಟ್ಟು ನಿಟ್ಟಾಗಿ ಪಾವತಿಸುವಂತೆ ಮನವರಿಕೆ ಮಾಡಿಕೊಡುವಂತೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement