ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೇಂದ್ರ ಸರ್ಕಾರ ಜನ ಸಾಮಾನ್ಯರಿಗೆ ಹೊರೆ

Lingaraj Badiger
Updated On : 21 Jun 2013, 11:02 am

ಚಿಕ್ಕಮಗಳೂರು: ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರೈತರು, ಕಾರ್ಮಿಕರು ಮತ್ತು ದೇಶದ ಜನ ಸಾಮಾನ್ಯರಿಗೆ ಹೊರೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವರಸಿದ್ದಿ ವೇಣುಗೋಪಾಲ್ ಹೇಳಿದ್ದಾರೆ.
 ಗುರುವಾರ ನಡೆದ ಬಿಜೆಪಿ ಬೂತ್ ಮಟ್ಟದ  ಸಭೆಗೆ ಚಾಲನೆ ನೀಡಿ ಅವರು ಮಾತನಾಡಿ, ಕೇಂದ್ರದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪೆಟ್ರೋಲ್ ಬೆಲೆಯನ್ನು ಹಲವು ಬಾರಿ ಏರಿಸುವ ಮೂಲಕ ಪರೋಕ್ಷವಾಗಿ ನಿತ್ಯ ಬಳಕೆ ವಸ್ತುಗಳನ್ನು ಬೆಲೆ ದುಬಾರಿಯಾಗಿಸಿದೆ. ಇದರಿಂದ ಜನ ಸಾಮಾನ್ಯರ ಜೀವನ ಕಬ್ಬಿಣದ ಕಡಲೆಯಂತಾಗಿದೆ ಎಂದರು.
 ಕಾಂಗ್ರೆಸ್ ಸರ್ಕಾರದ ವೈಪಲ್ಯಗಳ ಬಗ್ಗೆ ಬೂತ್ ಮಟ್ಟದಲ್ಲಿ ತಿಳಿಹೇಳುವ ಅವಶ್ಯವಿದೆ. ಯುವಕರು, ಮಹಿಳೆಯರನ್ನು ಪಕ್ಷಕ್ಕೆ ಸೆಳೆದು ನಮ್ಮ ಮುಂದಿನ ಜನಪರ ಆಶೋತ್ತರಗಳ ಬಗ್ಗೆ ವಿವರಿಸಬೇಕು, ನಿಷ್ಟೆ ಪ್ರಾಮಾಣಿಕತೆಯನ್ನು ಕಾರ್ಯಕರ್ತರು ಮೈಗೂಡಿಸಿಕೊಂಡರೆ ಅಧಿಕಾರ ತಾನಾಗಿಯೆ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಶಾಸಕ ಸಿ.ಟಿ. ರವಿಯವರೆ ನಿದರ್ಶನ ಎಂದು ಹೇಳಿದರು.
 ನಗರಸಭೆ ಸದಸ್ಯ ಅಬ್ದುಲ್ ರೆಹಮಾನ್ ಖುರೇಶಿ ಮಾತನಾಡಿ, ಪರಿವಾರದ ದೀನ ದಯಾಳ್ ಉಪಾಧ್ಯಾಯರವರು ಸಂಘಕ್ಕಾಗಿ ಜೀವತ್ಯಾಗ ಮಾಡಿದರು. ನಮ್ಮ ಕಾರ್ಯಕರ್ತರಿಗೆ ರಕ್ತ ಮತ್ತು ಪ್ರಾಣಕೊಡಿ ಎಂದು ಕೇಳುತ್ತಿಲ್ಲ, ಸಮಯ, ಶಕ್ತಿ ಕೊಡಿ ಸಂಘಟನೆಗೆ ಶ್ರಮಿಸಿದರೆ ನಿಮ್ಮ ಬೆಳವಣಿಗೆಗೆ ಸಹಕಾರಿ. ನಾನು ಸಮಯ ಕೊಟ್ಟು ಪಕ್ಷ ನಿಷ್ಠೆ ತೋರಿದ ಪರಿಣಾಮ ಪಕ್ಷ ನನ್ನನ್ನು ಗುರುತಿಸಿ ಈ ಸ್ಥಾನಕ್ಕೇರಿಸಿದೆ. ಪಕ್ಷದ ಬಲ ನಿಮ್ಮ ಪ್ರತಿಷ್ಠೆ ಮತ್ತು ಗೌರವವನ್ನು ಹೆಚ್ಚಿಸುತ್ತಿದೆ ಎಂದರು.
 ಬೂತ್ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ್‌ರನ್ನು ಅಭಿನಂದಿಸಲಾಯಿತು. ಉಪಾಧ್ಯಕ್ಷ ನಾಗೇಶ್ ಸೇರಿದಂತೆ 11 ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement