ರಾಹುಲ್ ಗಾಂಧಿ ಹುಟ್ಟುಹಬ್ಬ ಆಚರಣೆ
ಚಿಕ್ಕಮಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ 43 ನೇ ಹುಟ್ಟುಹಬ್ಬವನ್ನು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಜಿಲ್ಲಾ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸುವ ಮೂಲಕ ಆಚರಿಸಿದರು. ನಂತರ ನಗರಸಭೆ ಮಾಜಿ ಸದಸ್ಯ ಸಂದೀಪ್ ಮಾತನಾಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಗಾಂಧಿ ಕುಟುಂಬದ ರಾಹುಲ್, ಅಧಿಕಾರ ವಿಷ ಇದ್ದ ಹಾಗೆ ಎಂಬ ಮಾತನ್ನು ಯುವ ವಯಯಸ್ಸಿನಲ್ಲೆ ಅರಿತು ಮಾತನಾಡಿದ್ದಾರೆ ಎಂದರು.
ಕ್ಷೇತ್ರ ಸಮಿತಿ ಅಧ್ಯಕ್ಷ ಸಿ.ಎಸ್. ಸಂದೀಪ್ ಮಾತನಾಡಿ, ಸ್ವಾರ್ಥಕ್ಕಾಗಿ ರಾಜಕೀಯವನ್ನು ವೃತ್ತಿಯನ್ನಾಗಿಸಿಕೊಳ್ಳುತ್ತಿರುವ ಈ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ದೇಶ ಸೇವೆಗೆ ಇಡೀ ಕುಟುಂಬವೇ ಜೀವ ಸವೆಸುತ್ತಿದೆ ಎಂದರು. ಪ್ರಕಾಶ್, ಶಿವಕುಮಾರ್, ಶ್ರೀಧರ್ ಉರಾಳ್, ಚಂದ್ರೇಗೌಡ, ಓಂಕಾರೇಗೌಡ, ಶಶಿ, ಮಧು, ಮನ್ಸೂರ್, ಚಂದ್ರೇಗೌಡ ಇದ್ದರು.
--