ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಡಿಮೆಯಾದ ಗಾಳಿ- ಮಳೆ ಆರ್ಭಟ

Lingaraj Badiger
Updated On : 22 Jun 2013, 10:49 am

ಶೃಂಗೇರಿ: ತಾಲೂಕಿನಾದ್ಯಂತ ಕಳೆದ ಕೆಲದಿನಗಳಿಂದ ಉಂಟಾಗಿದ್ದ ಗಾಳಿ ಮಳೆಯ ಆರ್ಭಟ ಶುಕ್ರವಾರ ಕಡಿಮೆಯಾಗಿದೆ. ಶುಕ್ರವಾರ ಮಳೆ, ಬಿಸಿಲ ವಾತಾವರಣವಿತ್ತು. ಗಾಳಿಯ ಆರ್ಭಟ ಕಡಿಮೆಯಾಗಿದೆ. ಗಾಳಿಗೆ ಮರಗಳು, ಬಿದಿರು ಮಳೆಗಳು ವಿದ್ಯುತ್ ಲೈನ್ ಮೇಲೆ ಉರುಳಿ ಸಾಕಷ್ಟು ವಿದ್ಯುತ್ ಕಂಬಗಳು, ತಂತಿಗಳು ತುಂಡಾಗಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿತ್ತು. ಕೆಲವೆಡೆ ಅಡಕೆ ಮರಗಳು ಧರೆಗುರುಳಿ ಸಾಕಷ್ಟು ಹಾನಿಯುಂಟಾಗಿದೆ. ಒಟ್ಟಾರೆಯಾಗಿ ಮಳೆ ಗಾಳಿಗೆ ತಾಲೂಕಿನಾದ್ಯಂತ ಸಾಕಷ್ಟು ಹಾನಿ ಉಂಟಾಗಿದೆ. ಮಳೆಯಿಂದ ಅಗತ್ಯ ನೀರು ಸಂಗ್ರಹವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಶುಕ್ರವಾರ ಸಂಜೆ ವೇಳೆಗೆ ಸಾಧಾರಣ ಮಳೆ ಬಿದ್ದಿತ್ತು.
ನಾಳೆ ಕಾರ್ಯಾಗಾರ
ಚಿಕ್ಕಮಗಳೂರು: ವರ್ತಕರ ಸಂಘದ ಆಶ್ರಯದಲ್ಲಿ ಜೂ.23ರಂದು ನಗರದ ವರ್ತಕರ ಭವನದಲ್ಲಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಕಾರ್ಮಿಕ ಕಾಯ್ದೆ, ಆಹಾರ ಪರವಾನಗಿ ಮತ್ತು ವ್ಯಾಟ್ ಬಗ್ಗೆ ಮಾಹಿತಿಯನ್ನು ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಜಿ.ಎ. ದಿನೇಶ್ ಗುಪ್ತಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ನಿವೃತ್ತ ಉಪ ಆಯುಕ್ತ ಡಿ. ಪಾರ್ಥನಾಥ್, ವಾಣಿಜ್ಯ ತೆರಿಗೆ ಸಹಾಯಕ ಆಯಕ್ತ ಆರ್.ಎ. ವಾಸೀಂ, ಸಹಾಯಕ ಕಾರ್ಮಿಕ ಆಯುಕ್ತ ಎ.ಜೆ. ಶ್ರೀವಳ್ಳಿ, ಆಹಾರ ಸುರಕ್ಷಿತ ಅಧಿಕಾರಿ ಚೆಲುವರಾಜ್, ವರ್ತಕರ ಸಂಘದ ಕಾರ್ಯದರ್ಶಿ ಟಿ.ಎಸ್. ಚಂದ್ರಶೇಖರ್, ಖಜಾಂಚಿ ಶಿವಪ್ರಕಾಶ್, ಹಿರಿಯ ವರ್ತಕರಾದ ಶಂಕರಮೂರ್ತಿ, ಸಂಪತ್ ಕುಮಾರ್, ಮಾಣಿಕ್ ಚಂದ್, ಬಾಬುಲಾಲ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೋವೇಷನ್ ಕ್ಲಬ್ ಆರಂಭಿಸಲು ಚಿಂತನೆ: ಪ್ರೊ. ಬಾರಿ
ಶಿವಮೊಗ್ಗ: ಸಂಶೋಧನೆಗೆ ಒತ್ತು ನೀಡುತ್ತಿರುವ ಕುವೆಂಪು ವಿವಿಯು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಇನ್‌ಕ್ಯುಬೇಷನ್ ಸೆಂಟರ್ ಫಾರ್ ರಿಸರ್ಚ್ ಅಂಡ್ ಇನ್ನೋವೇಷನ್ ಆರಂಭಿಸಲಿದೆ.
 ಶುಕ್ರವಾರ ಜ್ಞಾನ ಸಹ್ಯಾದ್ರಿಯಲ್ಲಿ ನಡೆದ ಶಿಕ್ಷಣ ಮಂಡಳಿ ಸಭೆಯಲ್ಲಿ ಈ ವಿಷಯ ತಿಳಿಸಿದ ಕುಲಪತಿ ಪ್ರೊ. ಎಸ್.ಎ. ಬಾರಿ, ಎಲ್ಲಾ ಕಾಲೇಜುಗಳಲ್ಲಿಯೂ ಸಹ ಇನ್ನೋವೇಷನ್ ಕ್ಲಬ್ ಆರಂಭಿಸಲು ಸೂಚನೆ ನೀಡಲಾಗಿದೆ ಎಂದರು.
ಒಬ್ಬ ಅಧ್ಯಾಪಕರು ವರ್ಷದಲ್ಲಿ ಕನಿಷ್ಠ ಒಂದು ಸಂಶೋಧನೆ ಮಾಡುವ ಬಗ್ಗೆ ಪ್ರಸ್ತಾವ ಕಳಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ಸಂಶೋಧನೆಯು ಎರಡು ವರ್ಷದ ಅವಧಿಯದ್ದಾದರೂ ಪರವಾಗಿಲ್ಲ ಎಂದು ಹೇಳಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement