ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ವ್ಯಾಯಾಮಗಳಿಂದ ಹೃದ್ರೋಗ ತಡೆ'

Vishwanath S
Updated On : 23 Jun 2013, 11:55 am

ಕ.ಪ್ರ.ವಾರ್ತೆ ,  ಚಿಕ್ಕಮಗಳೂರು ,   ಜೂ.22
ಕೊಬ್ಬಿನಂಶ ಕಡಿಮೆ ಸೇವನೆ, ನಡಿಗೆ ಸೇರಿದಂತೆ ನಿರಂತರ ಸಣ್ಣಪುಟ್ಟ ವ್ಯಾಯಾಮಗಳಿಂದ ಹೃದ್ರೋಗವನ್ನು ನಿಯಂತ್ರಿಸಬಹುದೆಂದು ನಾರಾಯಣ ಹೃದಯಾಲಯದ ತಜ್ಞ ಡಾ. ನಾರಾಯಣಮೂರ್ತಿ ಹೇಳಿದ್ದಾರೆ.
ರೋಟರಿ ಕಾಫಿಲ್ಯಾಂಡ್, ಆನ್ಸ್ ಕ್ಲಬ್ ಮತ್ತು ಪೂಜಾ ಹೆಲ್ತ್‌ಕೇರ್ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಹೃದಯ ಮತ್ತು ಮಧುಮೇಹ ತಪಾತಣಾ ಶಿಬಿರ ಶನಿವಾರ ಉದ್ಘಾಟಿಸಿ ಮಾತನಾಡಿದರು. ಧೂಮಪಾನ, ಮಧುಮೇಹ ಮತ್ತು ರಕ್ತದಒತ್ತಡ ನಿಯಂತ್ರಿಸುವುದರಿಂದ ಹೃದಯ ಸಂಬಂಧಿ ರೋಗಗಳನ್ನು ದೂರವಿಡಬಹುದು. ಹೃದಯಕಾಯಿಲೆ ಎಂದರೆ ಸಾಮಾನ್ಯರಲ್ಲಿ ಭಯದ ವಾತಾವರಣವಿದೆ.
ಎದೆನೋವು: ಅನೇಕ ಸಂದರ್ಭಗಳಲ್ಲಿ ಗ್ಯಾಸ್ಟ್ರೋವನ್ನೆ ಹೃದಯರೋಗವೆಂದು ಆತಂಕಪಡುವ ಪ್ರಸಂಗಗಳೂ ಇವೆ. ಕನಿಷ್ಠ ಕೆಲವು ತಪಾಸಣೆಗಳಿಂದ ರೋಗದ ಸ್ವರೂಪ ಅರಿಯಬಹುದು. ಎದೆನೋವು ಪದೇ ಪದೇ ಕಾಣಿಸಿಕೊಳ್ಳುವುದು, ಓಡಾಟದಲ್ಲಿ ಅಥವಾ ಕೆಲಸ ಮಾಡುವಾಗ ನೋವು, ತಲೆ ತಿರುವು, ಉಬ್ಬಸ ಹೃದಯಕಾಯಿಲೆಯ ಪ್ರಮುಖ ಲಕ್ಷಣಗಳು. ಸಕ್ಕರೆಕಾಯಿಲೆ ಇದ್ದವರಿಗೆ ಯಾವುದೇ ವಯಸ್ಸಿನಲ್ಲೂ ಹೃದ್ರೋಗ ತೊಂದರೆ ಕಾಣಿಸಿಕೊಳ್ಳಬಹುದು ಎಂದ ಅವರು, ಪೌಷ್ಠಿಕಾಂಶದ ಸಾಂಪ್ರದಾಯಕ ಆಹಾರ ಬಳಕೆ ಉತ್ತಮ ಎಂದರು.
ಪ್ರಾಥಮಿಕ ತಪಾಸಣೆ: ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ಮಂಜುನಾಥ್, ಡೈಯಾಬಿಟಾಲಾಜಿಸ್ಟ್ ಡಾ. ಪ್ರತಿಮಾ ನಾರಾಯಣಮೂರ್ತಿ, ಪೂಜಾ ಹೆಲ್ತ್‌ಕೇರ್ ಮುಖ್ಯಸ್ಥ ಡಾ. ಶಶಿಧರ್, ಮೂಳೆತಜ್ಞ ಡಾ. ಶ್ರೀಧರ್ ಮಾತನಾಡಿದರು. ಡಾ. ಸುನೀತಾ ಶಶಿಧರ್ ಅಧ್ಯಕ್ಷತೆವಹಿಸಿ ಮಾತನಾಡಿ, 152 ಜನ ಈಗಾಗಲೇ ಶಿಬಿರದಲ್ಲಿ ನೊಂದಾಯಿಸಿದ್ದು ಅವರ ಪ್ರಾಥಮಿಕ ತಪಾಸಣೆ ಮಾಡಲಾಗಿದೆ. ಮಧುಮೇಹ ತಪಾಸಣೆ ಹಾಗೂ ಇಸಿಜಿ ಉಚಿತವಾಗಿ ಮಾಡಲಾಗಿದೆ. ವಿಜಯಪುರ ಶಾಲೆಯ ಸುಮಾರು 100 ಮಕ್ಕಳಿಗೆ ರಕ್ತಪರೀಕ್ಷೆ ಹಾಗೂ ಮಧುಮೆಹ ತಪಾಸಣೆಯನ್ನು ಆನ್ಸ್‌ಕ್ಲಬ್ ವತಿಯಿಂದ ಮಾಡಲಾಗಿತ್ತು ಎಂದರು.
ಆನ್ಸ್‌ಕ್ಲಬ್ ಕಾರ್ಯದರ್ಶಿ ಮಮತಾ ಬಾಲಕೃಷ್ಣ, ಖಜಾಂಚಿ ಭಾವನಾ ಪಟೇಲ್, ಸಹ ಕಾರ್ಯದರ್ಶಿ ಸೌರಭ ಪ್ರವೀಣ್, ಮಾಜಿ ಅಧ್ಯಕ್ಷೆ ಅನಿತಾ ನಾಗೇಂದ್ರ, ಮಾಜಿ ಸಹಾಯಕ ಗೌರ್ನರ್ ಉಜ್ವಲ್ ಪಡುಬಿದ್ರಿ, ಕಾಫಿಲ್ಯಾಂಡ್ ಕಾರ್ಯದರ್ಶಿ ಪ್ರವೀಣ್, ಮಾಜಿ ಅಧ್ಯಕ್ಷ ನಾಗೇಂದ್ರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement