ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇಂದಿನಿಂದ ಜೀರ್ಣೋದ್ಧಾರ

Vishwanath S
Updated On : 24 Jun 2013, 11:51 am

ಕಡೂರು: ಇಂದಿನಿಂದ ಮೂರು ದಿನಗಳ ಕಾಲ ಪಟ್ಟಣದ ಕೋಟೆಯ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಜೀರ್ಣೋದ್ದಾರ ಹಾಗೂ ಮಹಾ ಸಂಪ್ರೋಕ್ಷಣಾ ಮಹೋತ್ಸವ ನಡೆಯಲಿದೆ.
 ಮೂರು ದಿನಗಳ ಕಾಲ ನಡೆಯಲಿರುವ ಜೀಣೋದ್ದಾರ ಮಹೋತ್ಸವದಲ್ಲಿ ಮುಖ ಮಂಟಪ, ನೂತನ ಗರುಡಗಂಬ, ನೂತನ ಗೋಪುರ ಹಾಗೂ ಕಳಸಾರೋಹಣ,ದೇವಾಲಯ ಒಳಾಂಗಣದ ಶ್ರೀಲಕ್ಷ್ಮೀ, ಶ್ರೀಲಕ್ಷ್ಮೀ ನರಸಿಂಹಸ್ವಾಮಿ, ಶ್ರೀ ಪಾಂಡುರಂಗ ವಿಠಲ ಮತ್ತು ಶ್ರೀ ಆಳ್ವಾರ್ ದೇವರ ಕಲಾಕರ್ಷಣ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಮೈಸೂರಿನ ಪ್ರಧಾನ ಆಚಾರ್ಯ ವಿಧ್ವಾನ್ ಪಿ. ಸತ್ಯನಾರಾಯಣರವರ ನೇತೃತ್ವದಲ್ಲಿ ನಡೆಯಲಿದೆ.
 24ರ ಸೋಮವಾರ ಸಂಜೆ 6 ರಿಂದ ದೇವತಾ ಪ್ರಾರ್ಥನೆ, ವಿಶ್ವಕ್ಸೇನಾರಾಧನೆ, ಸ್ವಸ್ತಿ ಪುಣ್ಯಾಹವಾಚನ, ಮೃತ್ತಿಕಾ ಸಂಗ್ರಹಣ, ವಾಸ್ತುಹೋಮ, ಯಾಗಶಾಲಾ ಶುದ್ದಿ, ಅಕಲ್ಮಷ ಹೋಮ, ರಕ್ಷಾ ಬಂಧನ, ಮಹಾಮಂಗಳಾರತಿ ನಡೆಯಲಿದೆ. 25 ರ ಮಂಗಳವಾರ ಬೆಳಿಗ್ಗೆ 9 ರಿಂದ ಪುಣ್ಯಾಹವಾಚನ, ಪಂಚಾಗ್ನಿ, ಪೌಂಡರೀಕಾಗ್ನಿ, ಪ್ರಣಯನ, ಕುಂಭಸಾಧನೆ, ಕುಂಭಸ್ಥಾಪನೆ, ಮಹಾಶಾಂತಿ, ನಿತ್ಯಹೋಮ, ವಾಸ್ತುಶುದ್ದಿ, ಗೋಪುರದ ನೂತನ ವಿಗ್ರಹಗಳ ಅಕ್ಷ್ಮುನ್ಮೋಚ ನಿರೀಕ್ಷಣೆ, ಕ್ಷೀರಾಧಿವಾಸ, ಜಲಾಧಿವಾಸ, ಬಲಿಹರಣ, ಮಹಾ ಮಂಗಳಾರತಿ ನಡೆಯಲಿದೆ.
 26ರ ಬೆಳಿಗ್ಗೆ 7 ರಿಂದ ನಿತ್ಯಹೋಮಗಳು, ಪ್ರಧಾನ ಸರ್ವ ದೈವತ್ವ ಹೋಮಗಳು, ಅಂತ ಹೋಮ, ಮಹಾ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ರಾಷ್ಟ್ರಾಶೀರ್ವಾದ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ಧಾರ್ಮಿಕ ಸಮಾರಂಭ ಜರುಗಲಿದ್ದು ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಕಡೂರು ಶಾಸಕ ವೈ.ಎಸ್.ವಿ. ದತ್ತ, ಮಾಜಿ ಶಾಸಕ ಡಾ.ವೈ.ಸಿ. ವಿಶ್ವನಾಥ್, ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್, ಕೆ.ಎಂ. ಕೆಂಪರಾಜು, ಜಯಮ್ಮ ಭಾಗವಹಿಸಲಿದ್ದಾರೆ. ಸಂಜೆ 5 ರಿಂದ ಶ್ರೀನಿವಾಸ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement