ಒತ್ತುವರಿ ಸಮಸ್ಯೆ ಬಗೆಹರಿಸಲು ಪ್ರಯತ್ನ; ಲೋಬೋ
ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರವು ನನಗೆ ತವರು ಮನೆ ಇದ್ದ ಹಾಗೆ ಎಂದು ಮಂಗಳೂರು ನಗರ ಶಾಸಕ (ಕಾಂಗ್ರೆಸ್) ಜಿ.ಎ. ಲೋಬೋ ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಡಿ.ಸಿ. ದಿವಾಕರ ಅವರ ಮನೆಯಲ್ಲಿದ್ದ ಮಾಜಿ ಶಿಕ್ಷಣ ಸಚಿವ ಎಚ್.ಜಿ. ಗೋವಿಂದೇಗೌಡರನ್ನು ಭೇಟಿ ನಂತರ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಒತ್ತುವರಿ ಸಮಸ್ಯೆ ಬಗ್ಗೆ ಮಾತನಾಡಿ, ಸಮಸ್ಯೆ ಬಗೆಹರಿಸಲು ಈಗಾಗಲೇ ಮುಖ್ಯಮಂತ್ರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ವಿಷಯವು ನ್ಯಾಯಾಲಯದಲ್ಲಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಕೊಪ್ಪ ಪಪಂ ಸದಸ್ಯ ಸುಬ್ರಮಣ್ಯಶೆಟ್ಟಿ, ಪಕ್ಷದ ಮುಖಂಡರಾದ ಇ.ಸಿ. ಶೇವಿಯಾರ್, ಕೆ.ಎಂ. ಸುಂದರೇಶ್, ಮಾಳೂರು ದಿಣ್ಣೆ ರಮೇಶ್, ಕೆ.ವಿ. ವಸಂತಕುಮಾರ್, ಕೆ.ಎ. ಅಬೂಬಕರ್ ಮೊದಲಾದವರು ಉಪಸ್ಥಿತರಿದ್ದರು.