ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಯುವ ಪೀಳಿಗೆಗೆ ಒಳ್ಳೆಯ ವಿಚಾರ ತಿಳಿಸೋಣ

Vishwanath S
Updated On : 24 Jun 2013, 11:49 am

ಕ.ಪ್ರ.ವಾರ್ತೆ ,   ತರೀಕೆರೆ ,    ಜೂ.23
ಇಂದಿನ ಯುವ ಪೀಳಿಗೆಗೆ ಒಳ್ಳೆಯ ವಿಚಾರ ತಿಳಿಸುವ ಪೂರ್ಣ ಹೊಣೆ ಎಲ್ಲರ ಮೇಲಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ತಿಳಿಸಿದರು.
ಅವರು ಭಾನುವಾರ ಅಜ್ಜಂಪುರದಲ್ಲಿ ಏರ್ಪಡಿಸಲಾಗಿದ್ದ ಅಜ್ಜಂಪುರದ ಸ್ವಾತಂತ್ರ್ಯ ಹೋರಾಟಗಾರ ಎಂ. ಮಲ್ಲಿಕಾರ್ಜುನಪ್ಪ ಇವರ ಶತಕ-ಸಂಭ್ರಮ ಸಮಾರಂಭದಲ್ಲಿ ಮಾತನಾಡಿದರು.
ಹಿರಿಯರನ್ನು ನೆನಪಿಸಿಕೊಳ್ಳಬೇಕು. ಸ್ವಾತಂತ್ರ್ಯದ ಪರಿಪೂರ್ಣ ಅರ್ಥದ ಬಗ್ಗೆ ಚಿಂತನೆ ಅಗತ್ಯವಾಗಿದ್ದು, ಇಂದು ರಾಜಕಾರಣ ಒಂದು ವ್ಯಾಪಾರವಾಗಿದೆ. ಹಿರಿಯರನ್ನು ಗೌರವಿಸುವಂತಹ ವಾತಾವರಣ ಬೆಳೆಯಬೇಕಾಗಿದ್ದು, ಮಕ್ಕಳನ್ನು ಸುಶೀಕ್ಷಿತರನ್ನಾಗಿ ಮಾಡಬೇಕಾಗಿದೆ ಹಾಗಾಗಿ ಹಿರಿಯರ ಅನುಭವಗಳನ್ನು ದಾಖಲೆಯಾಗಿ ಇಟ್ಟುಕೊಳ್ಳಬೇಕು ಎಂದರು.
ಹೇಳಲು ಹೆಮ್ಮೆ: ರಾಜ್ಯ ರೈತ ಸಂಘ ಹಾಗೂ ಹಸಿರು ನೇನೆ ಉಪಾಧ್ಯಕ್ಷ ಎಂ.ಮಹೇಶ್ ಅವರು ಮಾತನಾಡಿ ಅಜ್ಜಂಪುರದಲ್ಲಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ, ಚಳುವಳಿಯ ರಕ್ತ ನಮ್ಮಲ್ಲೂ ಹರಿದುಬಂದಿದೆ,
ಇಂತಹವರು ನಮ್ಮ ತಂದೆ ಎಂದು ಹೇಳಿಕೊಳ್ಳಲು ನಮಗೆ ತುಂಬಾ ಸಂತೋಷವಾಗುತ್ತದೆ ಎಂದರು.
ರೈತ ಹೋರಾಟಗಾರ ಕಡಿದಾಳ್ ಶಾಮಣ್ಣ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಮಲ್ಲಿಕಾರ್ಜುನಪ್ಪ ಅವರದ್ದು ಬಹು ದೊಡ್ಡ ವ್ಯಕ್ತಿತ್ವವಾಗಿದೆ. ನೂರು ಪುಟದ ನೆನಪಿನ ಪುಸ್ತಕ ಬರೆಯಬೇಕು. ಅವರ ಅನುಭವ ದಾಖಲಿಸಬೇಕೆಂದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಮಲ್ಲಿಕಾರ್ಜುನಪ್ಪ ಅವರು ಸ್ವಾತಂತ್ರ್ಯ ಚಳುವಳಿಯ ಮುಖ್ಯ ಕೊಂಡಿಯಾಗಿದ್ದು, ಸಾರ್ಥಕ ಬದುಕು ಸಾಗಿಸುತ್ತಿದ್ದಾರೆ ಎಂದು ತಿಳಿಸಿದ ಅವರು ಇತಿಹಾಸ ತಿಳಿದುಕೊಲ್ಳದವ ನಾಳಿನ ಕನಸನ್ನು ಕಾಣಲಾರ ಎಂದು ತಿಳಿಸಿದರು.
ಶತಕ ಸಂಭ್ರಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂ.ಮಲ್ಲಿಕಾರ್ಜುನಪ್ಪ ಮಾತನಾಡಿದರು. ರೈತ ಸಂಘದ ರಾಜ್ಯ ಮಹಿಳಾ ಅಧ್ಯಕ್ಷೆ ಅನುಸೂಯಮ್ಮ, ಮ್ಯಾಮ್‌ಕೋಸ್ ನಿರ್ದೇಶಕ ಆರ್. ದೇವಾನಂದ್, ಬಿ. ರುದ್ರಪ್ಪ, ರಾಜ್ಯ ಹೈಕೋಟ್ ವಕೀಲ ಮಹಂತೇಶ್ ಹೊಸಮಠ್, ಸ್ವಾತಂತ್ರ್ಯ ಹೋರಾಟಗಾರ ಬಿ.ಎಂ. ಏಕೋರಾಮಸ್ವಾಮಿ, ಹನುಮಂತಪ್ಪ ಮೊದಲಾದವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರ ಬಿ.ವಿ. ಗುರುಶಾಂತಪ್ಪ, ಕುಡ್ಲೂರು ಎಂ.ಎಸ್. ಕಲ್ಲಪ್ಪ, ಎಚ್.ಬಿ. ರುದ್ರಪ್ಪ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹನುಮಂತಪ್ಪ ನಿರೂಪಿಸಿದರು. ಅನನ್ಯ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement