ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಸಿ ಮಡಿಯಲ್ಲೇ ಜಾಗ್ರತೆ ವಹಿಸಿ: ಉಮಾಶಂಕರ್

Lingaraj Badiger
Updated On : 25 Jun 2013, 11:50 am

ಮೂಡಿಗೆರೆ: ಮಲೆನಾಡು ಪ್ರದೇಶದಲ್ಲಿ ಮುಂಗಾರು ಮಳೆ ಹದವಾಗಿ ಬೀಳುತ್ತಿದ್ದು, ಇಲ್ಲಿನ ರೈತರು ಬತ್ತದ ಸಸಿ ಮಡಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪ್ರಥಮ ಹಂತವಾದ ಸಸಿ ಮಡಿ ತಯಾರಿಕೆಯಲ್ಲೇ ಮುಂಜಾಗ್ರತೆ ವಹಿಸಬೇಕೆಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗ ತಜ್ಞ ಉಮಾಶಂಕರ್ ತಿಳಿಸಿದರು. ಪಟ್ಟಣದ ಹ್ಯಾಂಡ್ ಪೋಸ್ಟ್‌ನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ಹಮ್ಮಿಕೊಳ್ಳಲಾಗಿದ್ದ ಬತ್ತದ ಬೆಳೆ ಬೀಜೋಪಚಾರದ ಕಾರ್ಯಗಾರ ಉದ್ಘಾಟಿಸಿ  ಮಾತನಾಡಿದರು.
ರೋಗ ನಿಯಂತ್ರಿಸಿ: ಬತ್ತದ ಬೆಳೆಗೆ ಪ್ರಮುಖವಾಗಿ ತಗಲುವ ರೋಗಗಳಾದ ಬೆಂಕಿರೋಗ, ಹುಸಿಕಾಡಿಗೆ, ಊದುತ್ತಿ ರೋಗಕ್ಕೆ ಬೀಜದ ಬತ್ತವು ಕಾರಣವಾಗಲಿದ್ದು, ರೈತರು ಸಸಿಮಡಿಗೆ ಮೊದಲೇ ಬೀಜೋಪಚಾರ ಮಾಡಿಕೊಳ್ಳುವ ಮೂಲಕ ರೋಗಗಳನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು. ಒಂದು ಎಕರೆಗೆ ಬೇಕಾಗುವ 25 ಕೆ.ಜಿ. ಬತ್ತದ ಬೀಜವನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಜೊಳ್ಳು ಹಾಗು ಕೀಟದ ಬಾಧೆಗೆ ಒಳಗಾದ ಬತ್ತವನ್ನು ತೆಗೆದ ನಂತರ ನೀರಿನಲ್ಲಿ ನೆನೆಸಿ ಬತ್ತವನ್ನು ನೀರಿನಿಂದು ಬಸಿದುಕೊಂಡು ಮನೆಯ ಮುಂದೆ ನೆರಳಿನ ಜಾಗದಲ್ಲಿ ಅಗಲವಾದ ಚೀಲದ ಮೇಲೆ ಹರಡಿ ಪ್ರತಿ ಕೆ.ಜಿ. ಬತ್ತದ ಬೀಜಕ್ಕೆ 4 ಗ್ರಾಂ. ನಂತೆ ಕಾರ್ಬೆಂಡೇಜಿಂ ಶಿಲೀಂದ್ರನಾಶಕವನ್ನು ತೆಗೆದುಕೊಂಡು ಅಂದರೆ 100 ಗ್ರಾಂ ಪುಡಿ ಬೇಕಾಗುತ್ತದೆ. ಈ ಪುಡಿಯನ್ನು ನೆನೆಸಿದ ಬತ್ತದ ಬೀಜದ ಮೇಲೆ ಹರಡಿ ನಂತರ ಚೆನ್ನಾಗಿ ಮಿಶ್ರಮಾಡಿ ನಂತರ 10ರಿಂದ 15ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿ. ಬತ್ತದ ಬೀಜವನ್ನು ಗೋಣಿಚೀಲದಲದಲ್ಲಿ ತುಂಬಿಸಿ ಪುನಹ 24 ಘಂಟೆಗಳ ಕಾಲ ಒಂದು ಕೋಣೆಯಲ್ಲಿರಿಸಿ ಮೊಳಕೆ ಕಟ್ಟಿಸಬೇಕು.
ಈ ರೀತಿ ಮೊಳಕೆ ಕಟ್ಟಿದ ಬೀಜವನ್ನು ಸಸಿಮಡಿ ತಯಾರಿಸಿದ ಜಾಗಕ್ಕೆ ಹಾಕಬೇಕು ಎಂದು ಮಾಹಿತಿ ನೀಡಿದರು.  ಈ ಕಾರ್ಯಗಾರದಲ್ಲಿ ತಾಲೂಕಿನ ನಾನಾ ಭಾಗಗಳಿಂದ ರೈತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement