ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಹಳ್ಳಿಕಾರ್ ಜನಾಂಗಕ್ಕೆ ಜಾಗೃತಿ ಅಗತ್ಯ'

Lingaraj Badiger
Updated On : 25 Jun 2013, 11:50 am

ಕ.ಪ್ರ.ವಾರ್ತೆ, ಮೂಡಿಗೆರೆ,  ಜೂ.24
ಹಳ್ಳಿಕಾರ್ ಒಕ್ಕಲಿಗ ಜನಾಂಗದವರು ನಾಗರಿಕ, ನೈತಿಕ, ಸಾಮಾಜಿಕ ಮತ್ತು ಆರ್ಥಿಕ ದೃಷ್ಟಿಯಿಂದ ಬಹಳ ಹಿಂದುಳಿದಿರುವುದರಿಂದ ಜನಜಾಗೃತಿ ಉಂಟು ಮಾಡಬೇಕಾಗಿದೆ ಎಂದು ಕನ್ನೆಹಳ್ಳಿ ಕೆ.ಕೆ. ಮಂಜುನಾಥ್ ತಿಳಿಸಿದರು.
ಪಟ್ಟಣದ ಚೈತನ್ಯ ಮಿನಿ ಹಾಲ್‌ನಲ್ಲಿ ನಡೆದ ಹಳ್ಳಿಕಾರ್ ಒಕ್ಕಲಿಗ ಜನಾಂಗದ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಳ್ಳಿಕಾರ್ ಒಕ್ಕಲಿಗ ಜನಾಂಗಕ್ಕೆ 1600 ವರ್ಷಗಳ ಇತಿಹಾಸವಿದೆ. ಸುಂಕೇನಹಳ್ಳಿ ಗುರಿಕಾರ್ ಎಸ್. ನರಸಿಂಹಯ್ಯ ಪ್ರಥಮ ಅಧ್ಯಕ್ಷರಾಗಿದ್ದರು ಎಂದರು.
ರಾಜ್ಯದಲ್ಲಿ ಹಳ್ಳಿಕಾರ್ ಜನಾಂಗಕ್ಕೆ ಕಲ್ಯಾಣ ಮಂಟಪ, ವಿದ್ಯಾರ್ಥಿನಿಲಯಗಳನ್ನು ಹೊಂದುವುದರ ಮೂಲಕ ತನ್ನ ಅಸ್ತತ್ವವನ್ನು ಉಳಿಸಿ ಕೊಂಡಿದೆ. ತಾಲೂಕಿನಾದ್ಯಂತ ಹಳ್ಳಿಕಾರ್ ಒಕ್ಕಲಿಗ ಜನಾಂಗದ ಅಭಿವೃದ್ಧಿಗೆ ಹೋರಾಟ ಮಾಡಲು ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಸಭೆಯಲ್ಲಿ ಕಲ್ಲಕ್ಕಿ ರಾಜ್‌ಕುಮಾರ್, ಪ್ರಸನ್ನ, ಸತೀಶ್, ಸಂದೀಪ್, ಚಂದ್ರಶೇಖರ್, ವಿಜಯ, ಅಜಿತ್‌ಕುಮಾರ್, ನಾಗರಾಜ್ ಸೇರಿ ಅನೇಕರು ಇದ್ದರು.
--
ಉತ್ತಮ ಮಳೆ
ತರೀಕೆರೆ: ನಾಲ್ಕೈದು ದಿನಗಳಿಂದ ವಿರಾಮ ನೀಡಿದ್ದ ಮಳೆ, ತರೀಕೆರೆಯಲ್ಲಿ ಸೋಮವಾರ ಮತ್ತೆ ಬಿರುಸುಗೊಂಡಿದೆ.  ಬೆಳಗಿನಿಂದಲೇ ಪ್ರಾರಂಭವಾಗಿದ್ದ ಮಳೆ 10 ಗಂಟೆಯವರೆಗೆ ಸುರಿಯಿತು. ನಂತರ ಸಾಯಂಕಾಲ ಮಳೆಯಾದ ಕಾರಣ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಹರಿಯಿತು.
ಅರ್ಜಿ ಆಹ್ವಾನ
ಚಿಕ್ಕಮಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು  ಜುಲೈ 25 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಮಗಳೂರು, ಇವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement